(ನ್ಯೂಸ್ ಕಡಬ) newskadaba.com ಮಾ. 10 ಬೆಂಗಳೂರು: ಮಾಜಿ ಐಪಿಎಲ್ ಛೇರ್ಮನ್ ಲಲಿತ್ ಮೋದಿ ಅವರಿಗೆ ನೀಡಲಾಗಿದ್ದ ವಾನೋಟೂ ದೇಶದ ಪಾಸ್ಪೋರ್ಟ್ ಅನ್ನು ರದ್ದು ಮಾಡಲಾಗಿದೆ.


ಭಾರತದ ವಶಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳಲು ವಾನೋಟೂಗೆ ಹೋಗುವ ಲಲಿತ್ ಮೋದಿ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಹುದು. ಭಾರತಕ್ಕೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಲಲಿತ್ ಮೋದಿ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ವಾನೋಟೂ ದೇಶದ ಪ್ರಧಾನಿ ಜೋಥಮ್ ನಾಪಾಟ್ ಅವರು ಮೋದಿಯ ಪಾಸ್ಪೋರ್ಟ್ ರದ್ದುಗೊಳಿಸುವಂತೆ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ವಾನೋಟೂ ದೇಶದ ಪಾಸ್ಪೋರ್ಟ್ ಸಿಕ್ಕ ಬಳಿಕ ಲಲಿತ್ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ತನ್ನ ಭಾರತೀಯ ಪಾಸ್ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಆದರೆ, ವಾನೋಟೂ ಪಾಸ್ಪೋರ್ಟ್ ರದ್ದುಗೊಳ್ಳಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ.