(ನ್ಯೂಸ್ ಕಡಬ) newskadaba.com ಮಾ. 06 : ಕಲಬುರಗಿ ಜಿಲ್ಲೆಯ ಕಾಲೇಜೊಂದರಲ್ಲಿ ಪಿಯು ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರನ್ನು ಬಂಧಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ಮಾ.೫ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಈ ವೇಳೆ ಕಲಬುರಗಿ ನಗರದ ಕಾಲೇಜೊಂದರಲ್ಲಿ ಅಕ್ರಮ ನಡೆದಿದೆ. ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿಯೂ ಆಗಿರುವ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣಾ ಪಾಟೀಲ್ ಪರೀಕ್ಷೆ ಬರೆದಿದ್ದಾರೆ. ದಲಿತ ಸೇನೆ ಕಾರ್ಯಕರ್ತರು ಕಾಲೇಜಿಗೆ ತೆರಳಿ ಅಕ್ರಮವನ್ನು ಪ್ರಶ್ನಿಸಿದಾಗ ಬದಲಿ ಅಭ್ಯರ್ಥಿ ಪರೀಕ್ಷೆ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಶಾಲೆಯ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಂಪೂರ್ಣ ಪಾಟೀಲ್‌ಳನ್ನು ಅರೆಸ್ಟ್ ಮಾಡಿದ್ದಾರೆ.