ಸುಳ್ಯ : ಪೈಪ್ ಲೈನ್ ಕಾಮಗಾರಿಯಿಂದ ಸಮಸ್ಯೆ – ಸಾಮಾನ್ಯ ಸಭೆಯಲ್ಲಿ ಚರ್ಚೆ

(ನ್ಯೂಸ್ ಕಡಬ) newskadaba.com ಮಾ. 06 ಸುಳ್ಯ: ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಗೊಂಡು ಚರ್ಚೆಗೆ ಕಾರಣವಾಗಿದೆ.

ನಗರದಲ್ಲಿ ನಡೆಯುತ್ತಿರುವ ಪೈಪ್ ಲೈನ್ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿದ್ದು ಇದರಿಂದ ನಾವು ಜನರಿಂದ ಬೈಗುಳ ತಿನ್ನುತ್ತಿದ್ದೇವೆ. ನಿಮಗೆ ಎಷ್ಟು ಹೇಳಿದರೂ ಸ್ಪಂದನೆ ನೀಡುತ್ತಿಲ್ಲ ನೀವು ಹೋಗಿ ನಗರದ ಮನಸ್ಥಿತಿ ನೋಡಿಕೊಂಡು ಬಂದು ಸಭೆಯಲ್ಲಿ ಉತ್ತರ ನೀಡಿ ಎಂದು ನ.ಪಂ ಸದಸ್ಯರು ಕೆಯುಡಬ್ಲ್ಯುಎಸ್ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಅವರನ್ನು ಕ್ಷೇತಕ್ಕೆ ತೆರಳುವಂತೆ ಆಗ್ರಹಿಸಿದರು. ಬಳಿಕ ಇತರ ವಿಷಯಗಳ ಕುರಿತು ಚರ್ಚೆ ನಡೆಯಿತು.

error: Content is protected !!
Scroll to Top