ಗುಪ್ತಚರ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 30 ಜನರಿಗೆ ವಂಚನೆ; ಇಬ್ಬರ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನಲ್ಲಿ ಗುಪ್ತಚರ ವಿಶೇಷ ಅಧಿಕಾರಿಗಳ ಉದ್ಯೋಗಗಳನ್ನು ಕೊಡಿಸುವುದಾಗಿ ಸುಮಾರು 30 ಜನರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕೇಂದ್ರ ಅಪರಾಧ ಶಾಖೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಬೀದರ್‌ನ ವೇಣುಗೋಪಾಲ್ (38) ಮತ್ತು ಆಂಧ್ರಪ್ರದೇಶದ ಅರವಿಂದ್ ನಾಯ್ಡು (36). ಆರೋಪಿಗಳು ವಂಚನೆಗೆ ಬಳಸಿದ್ದ ‘ರಾ’ ಸಂಸ್ಥೆಯ 86 ಲೆಟರ್‌ಹೆಡ್‌, 6 ಗುರುತಿನ ಚೀಟಿ, 6 ನಕಲಿ ನೇಮಕಾತಿ ಪತ್ರ ಹಾಗೂ 9 ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಬೆಂಗಳೂರಲ್ಲಿ ಫೆ. 26, 27ರಂದು ಬೃಹತ್ ಉದ್ಯೋಗ ಮೇಳ- ಉಚಿತ ಬಸ್ ವ್ಯವಸ್ಥೆ

ಬೆಂಗಳೂರಿನ ಜೆ.ಪಿ. ನಗರದ ಸಂತ್ರಸ್ತರೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ವೇಣುಗೋಪಾಲ್ ವಾಸಿಸುತ್ತಿದ್ದ ಗಾಂಧಿನಗರದ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!
Scroll to Top