’ಅನೋರಾ’ಗೆ ಆಸ್ಕರ್‌ ಅವಾರ್ಡ್‌

(ನ್ಯೂಸ್ ಕಡಬ) newskadaba.com ಮಾ. 03: ವಾಷಿಂಗ್ಟನ್:‌ 97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಹಾಲಿವುಡ್‌ ಸೇರಿದಂತೆ ಅನೇಕ ತಾರೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರೂಪಕ ಕಾನನ್ ಒ’ಬ್ರೇನ್ ಕಾರ್ಯಕ್ರಮದ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆದಿದ್ದು, ಹಲವರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಆರಂಭ ಆಯಿತು. ಅನೋರಾ ಚಿತ್ರ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದ್ದು, ಇದು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಮೂಲ ಚಿತ್ರಕಥೆ ಸೇರಿದಂತೆ ಆರು ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.


ಇದೀಗ ಐದು ಪ್ರಶಸ್ತಿಗಳನ್ನು ತನ್ನತ್ತ ಬಾಚಿಕೊಂಡಿದೆ. ದಿ ಬ್ರೂಟಲಿಸ್ಟ್ ಮೂರು ಪ್ರಶಸ್ತಿಗಳನ್ನು ಗೆದ್ದರೆ, ವಿಕೆಡ್ ಮತ್ತು ಡ್ಯೂನ್: ಪಾರ್ಟ್ ಟು ತಲಾ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ), ಅತ್ಯುತ್ತಮ ನಿರ್ದೇಶನ: ಸೀನ್ ಬೇಕರ್ (ಅನೋರಾ).
ಅತ್ಯುತ್ತಮ ನಟ: ಏಡ್ರಿಯನ್ ಬ್ರೋಡಿ (ದಿ ಬ್ರೂಟಲಿಸ್ಟ್) ಬೆಸ್ಟ್ ಒರಿಜಿನಲ್ ಸ್ಕೋರ್: ಡ್ಯಾನಿಯಲ್ ಬ್ಲೂಮ್ಬರ್ಗ್ (ದಿ ಬ್ರೂಟಲಿಸ್ಟ್), ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೇಜಿಲ್), ಅತ್ಯುತ್ತಮ ಛಾಯಾಗ್ರಹಣ: ಲೋಲ್ ಗ್ರಾವ್ಲೇ (ದಿ ಬ್ರೂಟಲಿಸ್ಟ್), ಬೆಸ್ಟ್ ಸೌಂಡ್ ಆ್ಯಂಡ್ ಬೆಸ್ಟ್ ವಿಶ್ಯುವಲ್ ಎಫೆಕ್ಟ್: ಡ್ಯೂನ್ 2, ಬೆಸ್ಟ್ ಡಾಕ್ಯುಮೆಂಟರಿ ಫ್ಯೂಚರ್ ಫಿಲ್ಮ್: ನೋ ಒದರ್ ಲ್ಯಾಂಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.

Also Read  ಕಡಬದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

error: Content is protected !!
Scroll to Top