ಗ್ರಾಹಕರಿಗೆ ಶಾಕ್‌ ಮೇಲೆ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ ಏರಿಕೆ

(ನ್ಯೂಸ್ ಕಡಬ) newskadaba.com ಮಾ. 01 ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ವಾಣಿಜ್ಯ LPG ಸಿಲಿಂಡರ್‌ಗಳ (LPG Price Hike) ಬೆಲೆಯಲ್ಲಿ 6 ರೂ.ಗಳ ಹೆಚ್ಚಳವನ್ನು ಘೋಷಿಸಿದ್ದು, ಇದು ಮಾರ್ಚ್ 1 ರ ಶನಿವಾರದಿಂದ ಜಾರಿಗೆ ಬರುತ್ತದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಬೆಲೆ 1,797 ರೂ.ಗಳಿಂದ 1,803 ರೂ.ಗಳಿಗೆ ಏರಿಕೆಯಾಗಿದೆ. ಸಿಲಿಂಡರ್​ನ ಬೆಲೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ. ಇಂಡಿಯನ್ ಆಯಿಲ್ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 6 ರೂ. ಹೆಚ್ಚಿಸಿದ್ದು, ಈ ಹಿಂದೆ 1797 ರೂ. ಇದ್ದ ಸಿಲಿಂಡರ್‌ ಇದೀಗ 1803 ರೂ.ಗೆ ಏರಿಕೆಯಾಗಿದೆ.

Also Read  ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ಕೆಲಸ ಸಿಗದ ಆತಂಕ ➤ ಅಣ್ಣ-ತಮ್ಮ ಆತ್ಮಹತ್ಯೆಗೆ ಶರಣು

ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಶೀಲಿಸುತ್ತವೆ. ಇಂದಿನಿಂದ ಹೊಸ ತಿಂಗಳು ಪ್ರಾರಂಭವಾಗುತ್ತಿದೆ. ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು 1797 ರೂ.ಗಳಿಂದ 1803 ರೂ.ಗಳಿಗೆ ಹೆಚ್ಚಿಸಲಾಗಿದೆ. ಕೋಲ್ಕತ್ತಾದಲ್ಲಿ ಹೊಸ ಬೆಲೆ 1907 ರೂ.ಗಳಿಂದ 1913 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1749.50 ರೂ.ಗಳಿಂದ 1755.50 ರೂ.ಗಳಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಈಗ 1959 ರೂ.ಗಳಿಂದ 1965 ರೂ.ಗಳಿಗೆ ಲಭ್ಯವಿರುತ್ತದೆ.

error: Content is protected !!
Scroll to Top