(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.23. ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟುಬೈಲು ಅಂಗನವಾಡಿಯಲ್ಲಿ ಮಹಿಳಾದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ ಅಧ್ಯಕ್ಷತೆ ವಹಿಸಿದ್ದರು. ‘ಪ್ರಮುಖಿ’ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ಯಾಮಾಲ ಜಿ. ಉದ್ಘಾಟಿಸಿದರು. ರಾಜ್ಯ ಯುವಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಮಂಗಳೂರು ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಜಿಸ್ಮಿತಾ ಕೆ.ಆರ್ ಉಪಸ್ಥಿತರಿದ್ದರು. ರತ್ನಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸನ್ಮಾನ:
ನೆಲ್ಯಾಡಿ ಕೊಲ್ಯೊಟ್ಟುಬೈಲು ಸರ್ವೆ ವ್ಯಾಪ್ತಿಯಲ್ಲಿ ಬರುವ ಹಿರಿಯ ನಾಗರಿಕೆ ದಾರಮ್ಮ ಅಣ್ಣುಶೆಟ್ಟಿ ಇವರನ್ನು ಸುನೀತಾ, ವಾಣಿಶೆಟ್ಟಿ, ಸಹಾಯಕಿ ಶೈಲಜಾ, ಸ್ತ್ರೀಶಕ್ತಿ ಸಂಘದ ಸದಸ್ಯೆಯರು, ಮಕ್ಕಳ ತಾಯಂದಿರು, ಮಹಿಳಾ ಮಂಡಲದ ಸದಸ್ಯರು ಶಾಲು ಹೊದಿಸಿ, ಹಾರಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಸುಚಿತ್ರಾ ಬಂಟ್ರಿಯಾಲ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಾದೇರಿ ಒಕ್ಕೂಟದ ಸೇವಾ ಪ್ರತಿನಿಧಿ ನಮಿತಾ ವಂದಿಸಿದರು. ವಿಜಯ, ಜಯಂತಿ ಎಮ್., ವನಜಾಕ್ಷಿ ಆರ್., ಶೀಲಾವತಿ, ಸುಧಾ ಕೆ., ಶಶಿರೇಖಾ, ರಕ್ಷಿತಾ ಎ., ಹೇಮಲತಾ ಆರ್., ಸುಜಾತ, ಪ್ರತಿಭಾ, ಶಶಿಕಲಾ, ಶಾರದಾ, ಕುಸುಮ ಮತ್ತಿತರರು ಉಪಸ್ಥಿತರಿದ್ದರು.
