ಕರ್ನಾಟಕ ಭಾಗದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಸಿದ್ಧ!

(ನ್ಯೂಸ್ ಕಡಬ) newskadaba.com ಫೆ. 27 ಬೆಂಗಳೂರು: ಕರ್ನಾಟಕ ಭಾಗದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಇದು ಚೆನ್ನೈವರೆಗೆ ಪೂರ್ಣಗೊಂಡಿಲ್ಲ. ಸಿದ್ಧವಾದ ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದ ಹಲವು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮ ಹರಿದಾಡುತ್ತಿದ್ದು, ಚೆನ್ನೈ ವರೆಗೆ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಭಾವನೆ ಮೂಡಿಸುತ್ತಿವೆ.

ಅಧಿಕೃತವಾಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲದಿದ್ದರೂ, ಕಳೆದ ಡಿಸೆಂಬರ್‌ನಲ್ಲಿ ಈ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎಐ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಕರ್ನಾಟಕದಲ್ಲಿ 71 ಕಿಮೀ ಉದ್ದದ(ಒಟ್ಟು 260 ಕಿಮೀ ಎಕ್ಸ್‌ಪ್ರೆಸ್‌ವೇಯಲ್ಲಿ) ರಸ್ತೆ ಪೂರ್ಣಗೊಂಡಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬರುವ ಉಳಿದ ಭಾಗಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಎಕ್ಸ್‌ಪ್ರೆಸ್‌ವೇಯಲ್ಲಿ ಚೆನ್ನೈ ತಲುಪುದಿಲ್ಲ ಎಂದಿದ್ದಾರೆ.

error: Content is protected !!
Scroll to Top