(ನ್ಯೂಸ್ ಕಡಬ) newskadaba.com ಫೆ. 26: ಬೆಂಗಳೂರು: ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಅಷ್ಟು ಸುಲಭವಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉನ್ನತ ಶಿಕ್ಷಣ ಸಚಿವ, ಖಾಸಗಿ ಸಂಯೋಜಿತ ಕಾಲೇಜುಗಳನ್ನು ಮುಚ್ಚುವುದೇ ದೊಡ್ಡ ಪ್ರಕ್ರಿಯೆಯಾಗಿದ್ದು, ಸರ್ಕಾರ ಅಂದುಕೊಂಡಂತೆ ಸ್ಥಾಪಿಸಿರುವ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದು ಅಷ್ಟು ಸುಲಭವಲ್ಲ ಎಂದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಹೇಳಿದ ನಾರಾಯಣ್, ಉನ್ನತ ಶಿಕ್ಷಣವನ್ನು ಉದಾರೀಕರಣಗೊಳಿಸಬೇಕು ಮತ್ತು ಪ್ರತಿ ಅರ್ಹ ಜಿಲ್ಲೆಗಳು ವಿಶ್ವವಿದ್ಯಾಲಯ ಪಡೆಯಬೇಕು ಎಂದರು.
ಮಂಡ್ಯ ವಿಶ್ವವಿದ್ಯಾನಿಲಯ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾನಿಲಯ ಎಂಬ ಮೂರು ವಿಶ್ವವಿದ್ಯಾಲಯಗಳನ್ನು ರಾಷ್ಟ್ರೀಯ ಮಟ್ಟದ ಕಾಲೇಜುಗಳಾಗಿ ಗುರುತಿಸಿದ ನಂತರ ಬೊಮ್ಮಾಯಿ ಸರ್ಕಾರ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತ್ತು.