(ನ್ಯೂಸ್ ಕಡಬ) newskadaba.com ಫೆ. 26: ಅಮೆರಿಕದಲ್ಲಿ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ ಭಾರತ ಕೂಡ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾ.10 ರಂದು ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.


ಭಾರತದಲ್ಲಿ ಪಾಸ್‌ಪೋರ್ಟ್ ಕಾಯ್ದೆ 1920, ವಿದೇಶಿಯರ ನೋಂದಣಿ ಕಾಯ್ದೆ 1939, ವಿದೇಶಿಯರ ಕಾಯ್ದೆ 1946 ಮತ್ತು ವಲಸೆ ಕಾಯ್ದೆ 2000, ಇವು ಪ್ರಸ್ತುತ ಭಾರತದಲ್ಲಿ ವಿದೇಶಿಯರಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ನಿಯಂತ್ರಿಸುತ್ತವೆ. ಪ್ರಸ್ತಾವಿತ ಕಾಯ್ದೆಯು ಅಸ್ತಿತ್ವದಲ್ಲಿರುವ 4 ಕಾನೂನುಗಳನ್ನು ರದ್ದುಗೊಳಿಸಿ, ನೂತನ ಕಾನೂನು ಜಾರಿಗೆ ತರುವ ಸಾಧ್ಯತೆಯಿದೆ.