(ನ್ಯೂಸ್ ಕಡಬ) newskadaba.com ಫೆ. 25 ಬೆಂಗಳೂರು: ಮಾಹಿತಿ ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ಫೆ. 27ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗೆಫೆಕ್ಸ್ 2025 ಶೃಂಗಸಭೆ ನಡೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


ದೇಶದ ಪ್ರಮುಖ ಎವಿಜಿಸಿ-ಎಕ್ಸ್‌ಆರ್ ಸಮ್ಮೇಳನವು ಅನಿಮೇಶನ್, ದೃಶ್ಯಪರಿಣಾಮಗಳು, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತ್ರತ ನೈಜತೆ) ವಿಶ್ವದ ನಂಬರ್ 1 ಎವಿಜಿಸಿ ಕೇಂದ್ರವಾಗಿ ಹಾಗೂ ಮಾಧ್ಯಮ ಮತ್ತು ಮನರಂಜನೆಯ ಕ್ಷೇತ್ರದಲ್ಲಿ ಭಾರತದ ಜಾಗತಿಕ ನಾಯಕತ್ವದ ಹಿಂದಿನ ಚಾಲಕ ಶಕ್ತಿಯಾಗಿ ಬೆಂಗಳೂರಿನ ಸ್ಥಾನವನ್ನು ಭದ್ರವಾಗಿಸುತ್ತ ಮಹತ್ವದ ಹೆಜ್ಜೆಯಾಗಿದೆ. 20,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಈ ವರ್ಷದ ಶೃಂಗದಲ್ಲಿ ಎವಿಜಿಸಿ-ಎಕ್ಸ್‌ಆರ್ ಕ್ಷೇತ್ರದಲ್ಲಿನ ತಜ್ಞರು, ಸ್ಟುಡಿಯೋಗಳು ಮತ್ತು ಉತ್ಸಾಹಿಗಳು ಪಾಲ್ಗೊಳ್ಳಲಿದ್ದು, ಇದು ಅತ್ಯಂತ ಪ್ರಭಾವಶಾಲಿಯಾದ ಮೇಳವಾಗಲಿದೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದರು.