(ನ್ಯೂಸ್ ಕಡಬ) newskadaba.com ಫೆ. 24. ಬೆಳ್ತಂಗಡಿ: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.


ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ನಿವಾಸಿ ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ಬಾಲಕ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಎಂಬಲ್ಲಿ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.