(ನ್ಯೂಸ್ ಕಡಬ) newskadaba.com ಫೆ. 22. ಹೈದರಾಬಾದ್: ತೆಲಂಗಾಣದಲ್ಲಿ ಶನಿವಾರ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಕನಿಷ್ಠ 30 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶ್ರೀಶೈಲಂ ಅಣೆಕಟ್ಟಿನ ಹಿಂದಿನ ಸುರಂಗದ ಒಂದು ಭಾಗದಲ್ಲಿ ಸೋರಿಕೆಯನ್ನು ಸರಿಪಡಿಸಲು ಕೆಲವು ಕಾರ್ಮಿಕರು ಒಳಗೆ ಹೋದಾಗ ಈ ಕುಸಿತ ಸಂಭವಿಸಿದೆ. ಅವರಲ್ಲಿ ಮೂವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಸುಮಾರು 6ಕ್ಕೂ ಹೆಚ್ಚು ಮಂದಿ ಒಳಗೆ ಸಿಲುಕಿದ್ದಾರೆ ಎನ್ನಲಾಗಿದೆ. ಅವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.ಈ ಸುರಂಗವು ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ನಿರ್ಮಾಣ ಹಂತದಲ್ಲಿರುವ ಅಮ್ರಾಬಾದ್‌ನಲ್ಲಿದೆ. ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂದೆ ಇರುವ ಎಸ್‌ಎಲ್‌ಬಿಸಿ ಸುರಂಗದ ಒಂದು ಭಾಗ ಶನಿವಾರ ಕುಸಿದಿದೆ. ಸುರಂಗದ ಒಂದು ಭಾಗದಲ್ಲಿ ಸೋರಿಕೆಯನ್ನು ಸರಿಪಡಿಸಲು ಕೆಲವು ಕಾರ್ಮಿಕರು ಒಳಗೆ ಹೋಗಿದ್ದರು ಆಗ ಸುರಂಗ ಕುಸಿದಿದೆ.



ಘಟನೆ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪೋಸ್ಟ್ ಮಾಡಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಕುಸಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿದ್ದರೂ, ಸುರಂಗದಲ್ಲಿ ಸಿಲುಕಿದ್ದವರ ಸಂಖ್ಯೆ ಹಾಗೂ ಮಾಹಿತಿಯನ್ನು ನೀಡಿಲ್ಲ. ಸುರಂಗ ಕುಸಿತ ಸಂಭವಿಸಿದ ತಕ್ಷಣವೇ ಸಿಎಂ ರಕ್ಷಣಾ ಕಾರ್ಯ ನಡೆಸಲು ಸೂಚಿಸಿದ್ದಾರೆ. ಲ್ಲಾಧಿಕಾರಿ, ಎಸ್‌ಪಿ, ಅಗ್ನಿಶಾಮಕ ಇಲಾಖೆ, ಹೈಡ್ರಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ಪರಿಹಾರ ಕ್ರಮಗಳನ್ನು ಒದಗಿಸುವಂತೆ ಅವರು ಆದೇಶಿಸಿದ್ದಾರೆ.