(ನ್ಯೂಸ್ ಕಡಬ) newskadaba.com ಫೆ. 22. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 137 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ ವಲ್ಲಿ ಡಿ’ಸೋಜಾ(47)ನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಆರೋಪಿ ವಲ್ಲಿ ಡಿ’ಸೋಜಾ ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 28 ತಿಂಗಳು ಹೆಚ್ಚುವರಿ ಕಠಿನ ಸಜೆ ಅನುಭವಿಸುವಂತೆ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.