(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚಿಸಿದ ದಂಪತಿಗಳನ್ನು ನಗರ ಪೊಲೀಸರು ಶುಕ್ರವಾರ ಬಂಧಿಕ್ಕೊಳಪಡಿಸಿದ್ದಾರೆ.


ತಿಲಕನಗರ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲತಾನ್ (28) ಬಂಧಿತರು. ಆರೋಪಿಗಳಿಂದ 2 ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, ರೂ.66 ಲಕ್ಷ ನಗರು, 24 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲಕ ಮಗ್ ಸಿಂಗ್ ನೀಡಿದ ದೂರಿನ ಮೇಲೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಕ್ಲೇನ್ ಸುಲ್ತಾನ್ ಈ ಹಿಂದೆ ನಗರದ ರೇಸ್ ಕೋರ್ಸ್ ನಲ್ಲಿ ಹಾಸ್ರ್ ರೈಡಿಂಗ್ ಕಲಿಯುವಾಗ ವಿದೇಶದ ಜಾಕಿಯೊಬ್ಬನ ಪರಿಚಯವಾಗಿತ್ತು. ಈ ವೇಳೆ ಆತ ವಿದೇಶದಲ್ಲಿ ಹಾರ್ಸ್ ಜಾರಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳನ್ನು ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ರೂ,50 ಸಾವಿರ ಕಮಿಷನ್ ನೀಡುವುದಾಗಿ ಹೇಳಿದ್ದ. ಅದರಂತೆ ಆರೋಪಿಗಳು ಆರಂಭದಲ್ಲಿ ಇಬ್ಬರಿಗೆ ಈ ವಿದೇಶಿ ಜಾಕಿ ಮುಖಾಂತರ ವೀಸಾ ಮಾಡಿಸಿಕೊಟ್ಟು ರೂ.1 ಲಕ್ಷ ಕಮಿಷನ್ ಪಡೆದಿದ್ದಾರೆ.