(ನ್ಯೂಸ್ ಕಡಬ) newskadaba.com ಫೆ. 22. ಮುಂಬೈ: ಮಾಜಿ ಕ್ರಿಕೆಟ್ ದಿಗ್ಗಜರ ಚೊಚ್ಚಲ ಆವೃತ್ತಿಯ ಇಂಟರ್‌ನ್ಯಾಷನಲ್ ಮಾಸ್ಟರ್ ಲೀಗ್ ಟಿ20(IML 2025) ಟೂರ್ನಿಗೆ ಇಂದು ಚಾಲನೆ ಸಿಗಲಿದೆ.

ಉದ್ಘಾಟನ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ. ಭಾರತ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಲಿದ್ದಾರೆ. ಲಂಕಾ ತಂಡಕ್ಕೆ ಕುಮಾರ ಸಂಗಕ್ಕರ ಸಾರಥ್ಯ ವಹಿಸಲಿದ್ದಾರೆ. ಮಾರ್ಚ್ 13, 14 ಕ್ಕೆ ಸೆಮಿ ಫೈನಲ್ ನಡೆದರೆ, ಮಾ.16ಕ್ಕೆ ಫೈನಲ್ ನಡೆಯಲಿದೆ.