ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ ಹಾರಿದ್ದ ಹೈದರಬಾದ್ ಮೂಲದ ವೈದ್ಯೆ ಶವ ಪತ್ತೆ!

(ನ್ಯೂಸ್ ಕಡಬ) newskadaba.com ಫೆ. 20. ಕೊಪ್ಪಳ: ಮೋಜಿಗಾಗಿ ಫ್ರೆಂಡ್ಸ್ ಮುಂದೆಯೇ ತುಂಗಭದ್ರಾ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ಮಹಿಳಾ ವೈದ್ಯೆ ಅನನ್ಯಾ ರಾವ್ ಶವ ಪತ್ತೆಯಾಗಿದೆ. ಈ ಘಟನೆ ಹಂಪಿಯಲ್ಲಿ ನಡೆದಿದೆ.

ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು. ಸ್ಮಾರಕಗಳಿಗೆ ಭೇಟಿ ನೀಡಿದ ನಂತರ, ಮಂಗಳವಾರ ರಾತ್ರಿ ಸಣಾಪುರ ಗ್ರಾಮದ ಅತಿಥಿ ಗೃಹದಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಮೂವರು ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದಾರೆ.

ಇದೇ ಸಂದರ್ಭದಲ್ಲಿ ಅನನ್ಯಾ ರಾವ್ ಸುಮಾರು 25 ಅಡಿ ಎತ್ತರದ ಬಂಡೆಯಿಂದ ನೀರಿಗೆ ಹಾರಿ ಈಜಲು ಬಯಸಿದರು. ಬಂಡೆಯಿಂದ ನೀರಿಗೆ ಹಾರಿದ ಅನನ್ಯಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಈಜುತ್ತಿದ್ದರು. ಆದರೆ, ಶೀಘ್ರದಲ್ಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋದರು. ಈ ವೇಳೆ ಆಕೆಯನ್ನು ಉಳಿಸಲು ಸ್ನೇಹಿತರು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನಗಳು ವ್ಯರ್ಥವಾಯಿತು. ಗುರುವಾರ ಬೆಳಗ್ಗೆ ಅನನ್ಯಾ ರಾವ್ ಅವರ ಶವವನ್ನು ಹೊರತೆಗೆಯಲಾಗಿದೆ.

error: Content is protected !!
Scroll to Top