(ನ್ಯೂಸ್ ಕಡಬ) newskadaba.com ಫೆ. 18. ಮೇಗಿನಪೇಟೆ ಚಂದ್ರಸ್ವಾಮಿ ಬಸದಿಯಲ್ಲಿ ನಡೆದ ಪಂಚ ಕಲ್ಯಾಣ ಮಹೋತ್ಸವಕ್ಕೆ ಪೂರಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೇಪು, ಮಾಣಿ ವಲಯದ ಸೇವಪ್ರಾತಿನಿಧಿಗಳು, ಸಿ.ಎಸ್.ಸಿ ಸೇವಾದಾರರು, ಶೌರ್ಯ ತಂಡದ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಒಟ್ಟು ಸೇರಿ ಎಲ್ಲಾ ಕೆಲಸ ಕಾರ್ಯಗಳನ್ನು ಅತ್ಯುತ್ತಮವಾಗಿ ನೆರವೇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಇದಕ್ಕೆ ಪೂರಕ ಸಲಹೆ ನೀಡಿದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಯೋಜನಾಧಿಕಾರಿ ರಮೇಶ್, ಕೃಷಿ ಅಧಿಕಾರಿ ಚಿದಾನಂದ ಕೇಪು, ವಲಯ ಮೇಲ್ವಿಚಾರಕರಾದ ಜಗದೀಶ್, ಮಾಣಿ ವಲಯದ ಮೇಲ್ವಿಚಾರಕಿ ಶ್ರೀಮತಿ ಆಶಾ ಪಾರ್ವತಿ ಮೊದಲಾದವರು ಉಪಸ್ಥಿತರಿದ್ದರು.