‘ಮಹಾ ಕುಂಭಮೇಳದಿಂದ ಯುಪಿ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭ’- ಯೋಗಿ

(ನ್ಯೂಸ್ ಕಡಬ) newskadaba.com ಫೆ. 14 ಲಕ್ನೋ:  ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಿಂದ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ಇಂದು ಲಕ್ನೋದಲ್ಲಿ ನಡೆದ 114 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸುವ ಅವಕಾಶ ಸಿಗುತ್ತದೆ. ನಾವು ಮಾಡುವ ಎಲ್ಲಾ ಚಟುವಟಿಕೆಗಳು ನಮ್ಮ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

Also Read  ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ

ಕುಂಭಮೇಳವನ್ನು ಆಯೋಜಿಸಲು ಒಟ್ಟು 1,500 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ನಮ್ಮ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳ ಲಾಭ ಪಡೆದಿದೆ. 1,500 ಕೋಟಿ ರೂ. ಹಣವನ್ನು ಕುಂಭಮೇಳಕ್ಕೆ ಮಾತ್ರ ಖರ್ಚು ಮಾಡಿಲ್ಲ. ಪ್ರಯಾಗ್‌ರಾಜ್ ನಗರದ ನವೀಕರಣಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

error: Content is protected !!
Scroll to Top