(ನ್ಯೂಸ್ ಕಡಬ) newskadaba.com ಫೆ. 14. ಬೆಂಗಳೂರು: ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಭಾರತೀಯ ನೌಕಾಪಡೆಯ ಯೋಧ ಪ್ರವೀಣ್ ಸುಭಾಷ್ ಖಾನಗೌಡರ್ ಸಾವನ್ನಪ್ಪಿರುವ ದುರ್ದೈವ ಘಟನೆಯು ಚೆನ್ನೈನಲ್ಲಿ ನಡೆದಿದೆ.
2020ರ ಫೆಬ್ರವರಿ 12ರಂದು ನೌಕಾಪಡೆಯ ಭಾಗವಾದ ಪ್ರವೀಣ್, ಚಾಂದ್ರಾಯಣ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ವೇಳೆ ಆಕಸ್ಮಿಕವಾಗಿ ಬಂದೂಕು ಸಿಡಿದು, ಅದರ ಗುಂಡು ಅವರ ತಲೆಗೆ ತಲುಪಿದ ಪರಿಣಾಮ ಯೋಧ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯೋಧನ ಮೃತದೇಹ ಕಲ್ಲೋಳಿ ಗ್ರಾಮಕ್ಕೆ ತಲುಪಿದ್ದು, ಗ್ರಾಮದಲ್ಲಿರುವ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಅವರ ಅಂತ್ಯಸಂಸ್ಕಾರವು ಪಂಚಾಯಿತಿ ಪಕ್ಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.