ಕೇರಳ: ಮನಕುಲಂಗರ ದೇವಸ್ಥಾನದಲ್ಲಿ ಆನೆ ದಾಳಿಯಿಂದ ಕಾಲ್ತುಳಿತ – 3 ವೃದ್ಧರ ಸಾವು

(ನ್ಯೂಸ್ ಕಡಬ) newskadaba.com ಫೆ. 14. ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಾಲಯದಲ್ಲಿ ಗುರುವಾರ ಸಂಜೆ ನಡೆದ ಉತ್ಸವ ಸಂದರ್ಭದಲ್ಲಿ ಆನೆ ದಾಳಿಯಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೂರು ವೃದ್ಧರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ದೇವಾಲಯದಲ್ಲಿ ಉತ್ಸವದ ಅಂಗವಾಗಿ ಆನೆಗಳನ್ನು ಕರೆತರಲಾಗಿದ್ದು, ಪಟಾಕಿ ಸಿಡಿಸಿದಾಗ ಎರಡು ಆನೆಗಳು ಆತಂಕಕ್ಕೊಳಗಾಗಿ ಅಡ್ಡದಿಡ್ಡಿ ಓಡಾಡಲು ಆರಂಭಿಸಿವೆ. ಈ ವೇಳೆ ದೇವಾಲಯದ ಕಟ್ಟಡಕ್ಕೆ ಆನೆಗಳು ಡಿಕ್ಕಿ ಹೊಡೆದ ಪರಿಣಾಮ ಗೋಡೆಯೊಂದು ಕುಸಿದುಬಿದ್ದಿದೆ. ಗೋಡೆಯ ಕೆಳಗೆ ಸಿಲುಕಿದ ಮೂರು ಜನರು ಸಾವನ್ನಪ್ಪಿದ್ದಾರೆ.

Also Read  ಒಳಚರಂಡಿ ಯೋಜನೆಗಳ ಕುರಿತು ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರ

ಮೃತರಾದವರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಾಗಿದ್ದಾರೆ. ಇನ್ನು ಸುಮಾರು 20 ಜನರಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!
Scroll to Top