ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

(ನ್ಯೂಸ್ ಕಡಬ) newskadaba.com ಫೆ. 13. ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತ ನಡೆದ ಜಾಗದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಭೂ ಕುಸಿತದಿಂದ ಗುಡ್ಡ ಕುಸಿದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತ ಪರಿಣಾಮ ಸ್ಥಳಿಯರ ತೋಟಕ್ಕೆ ದೊಡ್ಡ ದೊಡ್ಡ ಪ್ರಮಾಣದ ಬಂಡೆಕಲ್ಲು ಹಾಗೂ ಮಣ್ಣಿನ ರಾಶಿ ಉರುಳಿ ಬಂದಿವೆ. ಕಳೆದ ಎರಡು ತಿಂಗಳ ಹಿಂದೆ ಇದೇ ಭಾಗದ ಸುತ್ತಲೂ ಭೂಮಿ ಕಂಪಿಸಿತ್ತು. ಘಟನಾ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿ ಭೂಕಂಪನದ ಬಗ್ಗೆ ದೃಢೀಕರಿಸಿದ್ದರು.

Also Read  ಮಂಗಳೂರು ವಿಮಾನ ನಿಲ್ದಾಣಕ್ಕೆ ಪರವಾನಿಗೆ ರಹಿತ ನಾಡಕೋವಿ ತಂದ ವ್ಯಕ್ತಿ ಅರೆಸ್ಟ್..!

ಈ ಹಿಂದೆ ಯಲ್ಲಾಪುರ ಭಾಗದ ಕಳಚೆಯಲ್ಲಿ ಕೂಡ ಭೂಮಿ ಕುಸಿದಿತ್ತು. ಜಿಎಸ್ಐ ತಜ್ಞರ ವರದಿ ಪ್ರಕಾರ ಜಿಲ್ಲೆಯಲ್ಲಿ 439 ಭೂಕುಸಿತ ವಲಯಗಳಿವೆ ಎಂದು ತಿಳಿದುಬಂದಿದೆ. ಮಳೆ ನಿಂತರೂ ಕೂಡ ಇಲ್ಲಿ ಭೂಕುಸಿತ ನಿಲ್ಲುತ್ತಿಲ್ಲ ಎಂಬುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

error: Content is protected !!
Scroll to Top