ಮಂಗಳೂರಿನಲ್ಲಿ ಐಟಿ ದಾಳಿ- ಟ್ರೇಡಿಂಗ್ ಕಂಪನಿಯ ಭಾರೀ ವಂಚನೆ ಬಯಲಿಗೆಳೆದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಫೆ. 13. ಮಂಗಳೂರು: ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ & ಕೋ, ಶಿವ ಪ್ರೇಮ್ ಟ್ರೇಡರ್ಸ್ ಮತ್ತು ಪರಮೇಶ್ವರಿ ಟ್ರೇಡಿಂಗ್ ಕಂಪನಿ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಟ್ರೇಡಿಂಗ್ ಕಂಪನಿ ಕಚೇರಿ, ಗೋಡೌನ್ ಹಾಗು ಟ್ರೇಡೀಂಗ್ ಕಂಪನಿ ಮಾಲಿಕರ ಮನೆ ಮೇಲೂ ದಾಳಿ‌ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಅಡಿಕೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಸಿ ಕೊಂಡಿರುವ ಸ್ವಸ್ತಿಕ್ ಟ್ರೇಡಿಂಗ್ ಮತ್ತು ಇತರ ಸಂಸ್ಥೆಗಳುಉತ್ತರ ಪ್ರದೇಶ, ಬಿಹಾರ, ದೆಹಲಿ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಸಂಸ್ಥೆಯಾಗಿದ್ದು,ಸಾವಿರಾರು ಕೋಟಿ‌ ರೂಪಾಯಿ ವ್ಯವಹಾರ ನಡೆಸಿ ಆದಾಯ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾದ ಹಿನ್ನಲೆ ದಾಳಿ‌ ನಡೆಸಿದ್ದಾರೆ. ದಾಳಿ ಸಂದರ್ಭ‌ ಅಕ್ರಮ ವಹಿವಾಟು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸಂಸ್ಥೆ ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಐಟಿ ಮನೆಯಲ್ಲಿ ಕೋಟ್ಯಾಂತರ ರೂಪಾಯಿ‌ ಮೌಲ್ಯದ ದಾಖಲೆ ಇಲ್ಲದ ಆಭರಣ ವಶಕ್ಕೆ ಪಡೆದು ,ಸತ್ಯೇಂದ್ರ ಶರ್ಮಾ ಮತ್ತು ಶಿವಕುಮಾರ್ ಶರ್ಮಾ ಎಂಬರಿಗೆ ಸೇರಿದ ಕಂಪನಿಗಳ ತನಿಖೆಯನ್ನು ಐ ಟಿ ಅಧಿಕಾರಿಗಳು ಮುಂದುವರಿಸಿದ್ದಾರೆ.

Also Read  ಪ್ರವಾಸಿಗರ ರಕ್ಷಣೆಗೆ ನಮ್ಮ ಆಧ್ಯತೆ ➤ ಡಾ|| ಚೂಂತಾರು

error: Content is protected !!
Scroll to Top