(ನ್ಯೂಸ್ ಕಡಬ) newskadaba.com ಫೆ. 13. ಬೆಂಗಳೂರು: ದೇಶದ ರಕ್ಷಣಾ ವ್ಯವಸ್ಥೆಗೆ ಸವಾಲಾಗಿರುವ ರಹಸ್ಯ ಯುದ್ಧವಿಮಾನಕ್ಕೆ ಠಕ್ಕರ್ ಕೊಡುವ ರೀತಿಯಲ್ಲಿ ಅತ್ಯಾಧುನಿಕ ರಾಡಾರ್‌ಗಳನ್ನು ಡಿಆರ್‌ಡಿಒ ಸಿದ್ಧಪಡಿಸಿದ್ದು, ಕೆಲ ಪ್ರಯೋಗ ಗಳ ಬಳಿಕ ಭಾರತೀಯ ರಕ್ಷಣಾ ಇಲಾಖೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ನೆರೆ ರಾಷ್ಟ್ರ ಚೀನಾ ಐದನೇ ಹಂತದ ಯುದ್ಧ ವಿಮಾನವನ್ನು ಸಿದ್ಧಪಡಿಸಿದ್ದರೆ, ಪಾಕಿಸ್ತಾನದ ಬಳಿಕ ಎಫ್ 15 ಯುದ್ಧ ವಿಮಾನವಿದೆ. ಆದರೆ ಈ ಆಧುನಿಕ ಯುದ್ಧ ವಿಮಾನಗಳು ರಾಡಾರ್‌ಗಳ ಕಣ್ಣು ತಪ್ಪಿಸಿ ನುಗ್ಗುವುದು ಸುಲಭವಾಗಿತ್ತು. ಏಕೆಂದರೆ, ಅತ್ಯಾಧುನಿಕ ಯುದ್ಧ ವಿಮಾನಗಳು ಈಗಿರುವ ರಾಡಾರ್ ಸಿದ್ಧಪಡಿ ಸಲು ಸಂಶೋಧನೆಗಳನ್ನು ನಡೆಸಿದ್ದು, ಇದರಲ್ಲಿ ಭಾಗಶಃ ಯಶಸ್ವಿಯಾಗಿದೆ ಎನ್ನಲಾಗಿದೆ.



ಪ್ರಚಂಚದಲ್ಲಿ ಸದ್ಯ ಐದನೇ ತಲೆಮಾರಿನ ಯುದ್ಧವಿಮಾನಗಳ ಹವಾ ನಡೆಯುತ್ತಿದೆ. ಆದರೆ ಡಿಆರ್‌ಡಿಒ ಒಂದು ಹೆಜ್ಜೆ ಮುಂದೆ ಹೋಗಿ, ಏಳನೇ ತಲೆಮಾರಿನ ಯುದ್ಧವಿಮಾನಗಳೂ ಈ ರಾಡಾರ್ ಕಣ್ಣಿಗೆ ಕಾಣುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಸದ್ಯಕ್ಕೆ ಇದಕ್ಕೆ ವಿಎಚ್‌ಎಸ್(ವೆರಿ ಹೈ ಫ್ರೀಕ್ವೆನ್ಸಿ) ಎನ್ನುವ ಹೆಸರನ್ನು ಇಡಲಾಗಿದ್ದು, ಪರೀಕ್ಷಾರ್ಥ ಸೇವೆ ಪೂರೈಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ತಯಾರಿಕೆ ಆರಂಭವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ಪ್ರಾಯೋಗಿಕ ಮಾದರಿಯನ್ನು ಈ ಬಾರಿಯ ಏರೋ ಇಂಡಿಯಾದಲ್ಲಿ ಅನಾವರಣಗೊಳಿಸಲಾಗಿದೆ.