(ನ್ಯೂಸ್ ಕಡಬ) newskadaba.com ಫೆ. 12. ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ, ಕಲ್ಲಡ್ಕ, ಅಳಿಕೆ, ವಿಟ್ಲ, ಸಾಲೆತ್ತೂರು, ಕೇಪು ವಲಯಗಳ ಶೌರ್ಯ ವಿಪತ್ತು ತಂಡದ ಒಟ್ಟು 35 ಸದಸ್ಯರು ಫೆ.13ರಿಂದ ಫೆ.17ರವರೆಗೆ ಭಗವಾನ್ ಚಂದ್ರಸ್ವಾಮಿ ಬಸದಿಯಲ್ಲಿ ನಡೆಯುವ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಅಂಗವಾಗಿ ವೇದಿಕೆ ನಿರ್ಮಾಣ, ಸಾಮಗ್ರಿಗಳ ಜೋಡಣೆ, ವೇದಿಕೆಯ ಅಲಂಕಾರ, ಪಾತ್ರಗಳ ಜೋಡಣೆ ಹಾಗೂ ಎಲ್ಲಾ ಮೂಲಸೌಕರ್ಯ ಕೆಲಸವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ತಾಲೂಕಿನ ಯೋಜನಾಧಿಕಾರಿಯಾದ ರಮೇಶ್, ಕೃಷಿ ಅಧಿಕಾರಿಯಾದ ಚಿದಾನಂದ, ವಿಟ್ಲ ವಲಯದ ಮೇಲ್ವಿಚಾರಕಿಯಾದ ಸರಿತಾ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.
ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ವಿಟ್ಲ ಪ್ರತಿಷ್ಠಾ ಮಹೋತ್ಸವಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮತ್ತು ಶೌರ್ಯ ಸದಸ್ಯರಿಂದ ಶ್ರಮದಾನ
