(ನ್ಯೂಸ್ ಕಡಬ) newskadaba.com ಕಡಬ, ಜು.03. ಇಲ್ಲಿನ ದೂರವಾಣಿ ವಿನಿಮಯ ಕೇಂದ್ರದ ಐತ್ತೂರು ಕೇಂದ್ರದಲ್ಲಿ ಟಿ.ಟಿ, ಆಗಿದ್ದ ವೆಂಕಪ್ಪ ಗೌಡರು ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದು, ಅವರಿಗೆ ದೂರವಾಣಿ ಕೇಂದ್ರದ ವತಿಯಿಂದ ಜು.30ರಂದು ಬೀಳ್ಕೋಡಲಾಯಿತು.
ವೆಂಕಪ್ಪ ಗೌಡರು 1984ರಲ್ಲಿ ಇಲಾಖೆಗೆ ಕರ್ತವ್ಯಕ್ಕೆ ನೇಮಕಗೊಂಡಿದ್ದು ಬಳಿಕ ಡಿ.ಟಿ.ಓ ಮಣಿಪಾಲ, ಸಿ.ಟಿ.ಒ ಮಂಗಳೂರು ದೂರವಾಣಿ ವಿನಿಮಯ ಕೇಂದ್ರ ಕಾಂಚನ ಬಜತ್ತೂರು, ಐತ್ತೂರು ಮರ್ದಾಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಡಬ ದೂರವಾಣಿ ವಿನಿಮಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಎಸ್.ಡಿ.ಇ ದೀಪಕ್ ಗುರ್ಜಾರ್ ಶಾಲು ಹೊದಿಸಿ ಫಲಪುಷ್ಪ ನೀಡಿ ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದಿವಾಕರ, ಸದಾನಂದ, ಗುಣಪಾಲ, ಉಪ್ಪಿನಂಗಡಿ ಹಾಗೂ ಕಡಬ ಬಿ.ಎಸ್.ಎನ್.ಎಲ್ ಉಪ ಮಂಡಲದ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.