‘ಮಕ್ಕಳನ್ನು ಮಾಡೆಲ್ಗಳಂತೆ ಪ್ರದರ್ಶನಕ್ಕಿಡಬೇಡಿ’ – ಪೋಷಕರಿಗೆ ಪ್ರಧಾನಿ ಮೋದಿ ಸಲಹೆ

(ನ್ಯೂಸ್ ಕಡಬ) newskadaba.com, ಫೆ.10. ನವದೆಹಲಿ: ನಿವಿಡೋಗಳ ಪೆ-ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪೋಷಕರಿಗೆ ಸಲಹೆ ನೀಡುತ್ತಾ, “ನೀವು ನಿಮ್ಮ ಮಕ್ಕಳಿಂದ ಬೇರೆಯವರ ಮಕ್ಕಳಂತೆ ಅಥವಾ ಅವರ ಪಠ್ಯಕ್ರಮದಂತೆ ಅವರ ಅಭ್ಯಾಸಗಳನ್ನು ನಿರೀಕ್ಷಿಸಬೇಡಿ. ನಿಮ್ಮ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿ, ಅವರಿಗೆ ತಮ್ಮ ಆಸಕ್ತಿಯ ಪ್ರಕಾರ ಅಧ್ಯಯನ ಮಾಡಲು ಅವಕಾಶ ಕೊಡಿ” ಎಂದು ಹೇಳಿದರು.

ಮಕ್ಕಳಿಗೆ ಮನಸ್ಸಿನಲ್ಲಿ ಉಂಟಾದ ಆಸಕ್ತಿಯನ್ನು ಮುಚ್ಚಿಕೊಳ್ಳಲು ಬಿಡಬೇಡಿ. ಅವುಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸಿ, ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದರು. “ಪ್ರತಿಯೊಬ್ಬ ಮಕ್ಕಳೂ ಒಂದು ವಿಶೇಷ ಪ್ರತಿಭೆಯನ್ನು ಹೊಂದಿದ್ದಾರೆ,” ಎಂದು ಹೇಳಿದರು. ಪೋಷಕರಿಗೆ ಸಲಹೆ ನೀಡಿದ ಅವರು, “ಮಕ್ಕಳಿಗೆ ಕೌಶಲ್ಯಗಳ ಬಗ್ಗೆ ಗಮನಹರಿಸಿ. ಅವರು ತಮ್ಮ ಆಸಕ್ತಿಗಳನ್ನು ಅನುಸರಿಸಬೇಕಾಗಿದೆ,” ಎಂದು ಹೇಳಿದ್ದಾರೆ.

Also Read  ಬಸ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಪದವಿಯಲ್ಲಿ ಯಶಸ್ಸು ಪಡೆಯಲು, ಮಕ್ಕಳಿಗೆ ತಮ್ಮ ಮನಸ್ಸನ್ನು ಸ್ವತಂತ್ರವಾಗಿ ಅನ್ವೇಷಿಸಲು ಅವಕಾಶ ನೀಡಿ. “ಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಹವ್ಯಾಸಗಳನ್ನು ಕಂಡುಹಿಡಿಯಲು ಅವಕಾಶ ನೀಡಬೇಕು ಎಂದರು. “ಮಕ್ಕಳು ರೋಬೋಟ್‌ ಅಲ್ಲ, ಅವರು ಬುದ್ಧಿವಂತ ವ್ಯಕ್ತಿಗಳು ಅವರನ್ನು ಕೇವಲ ಪುಸ್ತಕಗಳ ಮೂಲಕ ಮಾತ್ರ ಬೆಳೆಸುವುದು ಸರಿಯಲ್ಲ, ಜೊತೆಗೆ ಅವರ ಸ್ವತಂತ್ರತೆ, ಆಸಕ್ತಿ, ಮತ್ತು ಕೌಶಲ್ಯವನ್ನು ಬೆಳೆಯಲು ಅವಕಾಶ ನೀಡುವುದು ಮುಖ್ಯ ಎಂದು ಹೇಳಿದರು.

error: Content is protected !!
Scroll to Top