(ನ್ಯೂಸ್ ಕಡಬ) newskadaba.com ಕಡಬ, ಫೆ.09. ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮಖಾಂ ಉರೂಸ್ ಇಂದಿನಿಂದ (ಫೆಬ್ರವರಿ 09) ಆರಂಭಗೊಂಡು ಫೆಬ್ರವರಿ 13 ರ ವರೆಗೆ ನಡೆಯಲಿದೆ.
ಇಂದು ರಾತ್ರಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕೂಟು ಝಿಯಾರತ್ ಗೆ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವ ನೀಡಲಿದ್ದು, ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ನೆರವೇರಿಸಲಿದ್ದಾರೆ. ಫೆಬ್ರವರಿ 10 ಸೋಮವಾರ ರಾತ್ರಿ ಹಝ್ರತ್ ಮೌಲಾನಾ ಮುಫ್ತಿ ನಯೀಮ್ ರಝಾ ಸ’ಅದಿ ದುವಾ ನೆರವೇರಿಸಲಿದ್ದು, ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ನೆರವೇರಿಸಲಿದ್ದಾರೆ. ಫೆಬ್ರವರಿ 11 ಮಂಗಳವಾರ ರಾತ್ರಿ ತ್ವಾಹಾ ತಂಙಳ್ ಮತ್ತು ಸಂಗಡಿಗರಿಂದ ಬುರ್ದಾ ಮಜ್ಲಿಸ್ ನೆರವೇರಲಿದ್ದು, ಫೆಬ್ರವರಿ 12 ಬುಧವಾರ ರಾತ್ರಿ ಶಾಬುಲ್ ಹಮೀದ್ ತಂಙಳ್ ಮರ್ಧಾಳರವರ ದುವಾ ನೇತೃತ್ವದಲ್ಲಿ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಸಮಾರೋಪ ಸಮಾರಂಭವು ಫೆಬ್ರವರಿ 13 ಗುರುವಾರದಂದು ನಡೆಯಲಿದ್ದು, ಅಸ್ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ತಂಙಳ್ ಮುತ್ತನ್ನೂರು ಕೇರಳ ದುವಾ ಮತ್ತು ಪ್ರಭಾಷಣಗೈಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.