ರೆಪೋ ರೇಟ್‌ ದರ ಇಳಿಕೆ- ಬ್ಯಾಂಕ್‌ ಸಾಲಗಳ ಮೇಲಿನ ಬಡ್ಡಿದರ ಕಡಿತ; RBI ಮಹತ್ವದ ಘೋಷಣೆ

(ನ್ಯೂಸ್ ಕಡಬ) newskadaba.com , ಫೆ.07. ಮುಂಬೈ: ಕೇಂದ್ರ ಬಜೆಟ್‌ನಲ್ಲಿ12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಬೆನ್ನಲ್ಲೇ ದೇಶದ ಜನತೆಗೆ ಶುಭ ಶುಕ್ರವಾರವೇ ಮತ್ತೊಂದು ಗುಡ್‌ನ್ಯೂಸ್‌ ಸಿಕ್ಕಿದೆ. ನಿರೀಕ್ಷೆಯಂತೆ ರೆಪೋದರವನ್ನು(Repo Rate) ಶೇ. 0.25 ಪ್ರತಿಶತದಷ್ಟುಇಳಿಕೆ ಮಾಡುವ ಮೂಲಕ ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ಮಹತ್ವದ ಆದೇಶ ಹೊರಡಿಸಿದೆ.

 

ಆಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಿಗೆ RBI ಶುಕ್ರವಾರ ತುಸು ನಿರಾಳ ಒದಗಿಸಿದೆ. ಸಾಲಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವ ಆರ್ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ಇಂದು ಕೊನೆಗೊಂಡಿದ್ದು, ಈ ಹೊಸ ನೀತಿಯನ್ನು ಆರ್‌ಬಿಐ ಘೋಷಿಸಿದೆ. ಇನ್ನು ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Also Read  ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

error: Content is protected !!
Scroll to Top