(ನ್ಯೂಸ್ ಕಡಬ) newskadaba.com ಕಡಬ, ಫೆ.05. ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲ್ಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿಮಾಡಿದೆ. ನಲ್ಪಾಡ್ ವಿರುದ್ಧ ಶ್ರೀಕಿ ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್‌ಐಟಿ ಆರೋಪಿ ಎಂದು ಪರಿಗಣಿಸಿ ನೋಟಿಸ್ ನೀಡಿದೆ.
ಫೆ.7ರಂದು ವಿಚಾರಣೆಗೆ ಹಾಜರಾಗಲು ಎಸ್‌ಐಟಿ ನೋಟಿಸ್‌ನಲ್ಲಿ ಉಲ್ಲೇಳ ಮಾಡಿದೆ. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‌ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು. ಇದೀಗ ಶ್ರೀಕಿಯೊಂದಿಗೆ ಕೋಟ್ಯಾಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.