‘ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು’- ಮಂಕಾಳ ವೈದ್ಯ

(ನ್ಯೂಸ್ ಕಡಬ) newskadaba.com, ಫೆ.04 ಬೆಂಗಳೂರು: ಗೋವು ಮತ್ತು ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ರಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಗುಂಡಿಕ್ಕಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಗೋ ಕಳವು, ಹತ್ಯೆ ಮಾಡುವವರನ್ನು ರಸ್ತೆಯಲ್ಲಿ ಸರ್ಕಲ್​​ನಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಗುಂಡಿಕ್ಕಬೇಕು ಎಂದಿದ್ದಾರೆ. ನಾವು ಪೂಜೆ ಮಾಡುವ ಪ್ರಾಣಿ ಗೋವು. ಅದನ್ನು ನಾವು ಬಹಳ ಪ್ರೀತಿಯಿಂದ ಸಾಕುತ್ತೇವೆ. ಅದರ ಹಾಲನ್ನು ಕುಡಿದು ನಾವು ಬದುಕುತ್ತಿದ್ದೇವೆ. ಪೊಲೀಸ್ ಇಲಾಖೆಯವರಿಗೆ ನೇರವಾಗಿ ಹೇಳಿದ್ದೇನೆ. ಅವರು, ಇವರು ಎಂದು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.ಅಲ್ಲದೇ ಸೂಚನೆ ಮೀರಿ ಕ್ರೌರ್ಯ ಮುಂದುವರಿದರೆ, ರಸ್ತೆಯಲ್ಲಿ ಸರ್ಕಲಲ್ಲಿ ನಿಲ್ಲಿಸಿ ಗುಂಡುಹಾರಿಸುವಂತೆ ಮಾಡುತ್ತೇನೆ ಎಂದು ಮಂಕಾಳ ವೈದ್ಯ ಹೇಳಿದ್ದಾರೆ.

Also Read  ಪುತ್ತೂರು: ವಸತಿ ಗೃಹವೊಂದರಲ್ಲಿ ಅನ್ಯಕೋಮಿನ ಜೋಡಿ‌ ಪತ್ತೆ ➤ ಪೊಲೀಸರಿಗೊಪ್ಪಿಸಿದ ಹಿಂಜಾವೇ ಕಾರ್ಯಕರ್ತರು

error: Content is protected !!
Scroll to Top