ಮಹಾಕುಂಭಮೇಳ: ಪ್ರಯಾಗ್‌ರಾಜ್‌ನಲ್ಲಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ

(ನ್ಯೂಸ್ ಕಡಬ) newskadaba.com, ಜ.30 ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ ದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮೃತ ಪಟ್ಟಿದ್ದಾರೆ. ಕರ್ನಾಟಕದ ಭಕ್ತರ ಮಾಹಿತಿ ಪಡೆಯುವ ಸಂಬಂಧ ಕಂದಾಯ ಇಲಾಖೆ ಕಾವ್ಯದರ್ಶಿ ರಶ್ಮಿ ಅವರು ಈಗಾಗಲೇ ಉತ್ತರ ಪ್ರದೇಶ ಅಧಿಕಾರಿಗಳ ಜತೆ ಸಂಪ ರ್ಕದಲ್ಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾತನಾಡಿ, ಪ್ರಯಾಗರಾಜ್ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ರಾಜ್ಯದ ನಾಲ್ವರು ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿಯ ಜ್ಯೋತಿ ದೀಪಕ ಹತ್ತರವಾತ್ (44), ಅವರ ಪುತ್ರಿ ಮೇಘಾ ದೀಪಕ ಹತ್ತರವಾತ್ (24), ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ (61) ಹಾಗೂ ಶಿವಾಜಿ ನಗರದ ಮಹಾದೇವಿ ಹನಮಂತ ಭವನೂರ (48) ಮೃತಪಟ್ಟವರು ಎಂದು ತಿಳಿಸಿದರು.

Also Read  ದೇಯಿಬೈದೆತಿಯ ಅವಹೇಳನ ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹ ► ವಿಹಿಂಪ, ಬಜರಂಗದಳದಿಂದ ಕಡಬದಲ್ಲಿ ಪ್ರತಿಭಟನೆ

 

error: Content is protected !!
Scroll to Top