ನ್ಯಾಯಾಲಯದ ಮೂಲಕ ಜೀವನಾಂಶ ಪಡೆಯುವುದು ಸುಲಿಗೆಯಲ್ಲ: ಹೈಕೋರ್ಟ್

(ನ್ಯೂಸ್ ಕಡಬ) newskadaba.com, ಜ.29. ಬೆಂಗಳೂರು: ನ್ಯಾಯಾಲಯದ ಆದೇಶದ ಮೂಲಕ ಜೀವನಾಂಶ ಪಡೆಯುವುದು ಸುಲಿಗೆಗೆ ಸಮವಲ್ಲ ಎಂದು ಹೈಕೋರ್ಟ್ ಹೇಳಿದ್ದು, ತನ್ನ ಪತ್ನಿಯ ವಿರುದ್ಧ ವ್ಯಕ್ತಿಯೊಬ್ಬ ಮಾಡಿದ್ದ ಸುಲಿಗೆ ಮತ್ತು ಇತರ ಆರೋಪಗಳನ್ನು ರದ್ದುಗೊಳಿಸಿದೆ.

2023ರಲ್ಲಿ ಮಂಗಳೂರು ಮತ್ತು ಬೆಂಗಳೂರು ಮೂಲದ ದಂಪತಿಗಳು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಬೀಠ ಪುರಸ್ಕರಿಸಿದ್ದು, ಪತ್ನಿಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯ ಅದನ್ನು ಪರಿಗಣಿಸಿದಾಗ ಅದು ಸುಲಿಗೆಯ ಅಪರಾಧವಾಗುವುದಿಲ್ಲ. ಇದು ಕಾನೂನು ಪ್ರಕ್ರಿಯೆಗಳಾಗಿದ್ದು, ಉನ್ನತ ನ್ಯಾಯಾಲಯವು ಅದನ್ನು ಬದಲಾಯಿಸದಿದ್ದರೆ ಅಥವಾ ಮಾರ್ಪಡಿಸದಿದ್ದರೆ ಜೀವನಾಂಶ ಪಾವತಿಸಲು ಪತಿ ಕಾನೂನುಬದ್ಧವಾಗಿ ಬದ್ಧನಾಗಿರುತ್ತಾನೆ ಎಂದು ಹೇಳಿದೆ.

ಅರ್ಜಿದಾರರು 2007 ರಲ್ಲಿ ವಿವಾಹವಾಗಿದ್ದು, ಫೇಸ್‌ಬುಕ್ ಮೂಲಕ ಬಂದ ಸಂದೇಶದ ಮೂಲಕ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. 2020ರಲ್ಲಿ ಫೇಸ್‌ಬುಕ್ ಮೂಲಕ ಸಂದೇಶವೊಂದು ಬಂದಿದ್ದು, ನಿನ್ನ ಪತ್ನಿ ಮಾಜಿ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಾಳೆಂದು ತಿಳಿಸಲಾಗಿದ್ದು. ಇದರಿಂದ ದಂಪತಿಗಳ ನಡುವಿನ ಸಂಬಂಧ ಹಾಳಾಗಿತ್ತು.

Also Read  ಕೊರೊನಕ್ಕೆ ರಾಜ್ಯ ತತ್ತರ ➤ ಒಂದೇ ದಿನ 271 ಪಾಸಿಟಿವ್ ಕೇಸ್, 7 ಸೋಂಕಿತರ ಮೃತ್ಯು

ಈ ನಡುವೆ ಪತ್ನಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತಿತರ ಆರೋಪದ ಮೇಲೆ ದೂರು ದಾಖಲಿಸಿದ್ದಳು. ಬಳಿಕ ಪತಿ ಕೂಡ ಪತ್ನಿ ವಿರುದ್ಧ ಸುಲಿಗೆ ಆರೋಪ ಸೇರಿದಂತೆ ಇತರೆ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು.

error: Content is protected !!
Scroll to Top