(ನ್ಯೂಸ್ ಕಡಬ) newskadaba.com ಜ.28: ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ ತಲಾ 30 ರೂ. ಮತ್ತು 32 ರೂ. ಇಳಿಕೆ ಆಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ದರ 7,510 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 8,193 ರೂ. ಇದೆ.
22 ಕ್ಯಾರಟ್ ಚಿನ್ನದ ದರಗಳ ವಿವರ 22 ಕ್ಯಾರಟ್ನ 8 ಗ್ರಾಂ ಚಿನ್ನ 60,080 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 75,100 ರೂ. ಮತ್ತು 100 ಗ್ರಾಂಗೆ 7,51,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್ ಚಿನ್ನದ ದರಗಳ ವಿವರ 24 ಕ್ಯಾರಟ್ನ 8 ಗ್ರಾಂ ಚಿನ್ನ 65,544 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 81,930 ರೂ. ಮತ್ತು 100 ಗ್ರಾಂಗೆ 8,19,300 ರೂ. ಪಾವತಿಸಬೇಕಾಗುತ್ತದೆ.