ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡಿಕೆ ಶಿಬಿರ

(ನ್ಯೂಸ್ ಕಡಬ) newskadaba.com ಜ.27 ಕಡಬ :ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಪಶು ಸಂಗೋಪನ ಇಲಾಖೆಯ ಜಂಟಿ ಆಶ್ರಯದಲ್ಲಿ   ಕಡಬದ ಶ್ರೀಗಣೇಶ್ ಮೆಡಿಕಲ್ಸ್ನ ಸಹಯೋಗದೊಂದಿಗೆ  ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡುವ ಶಿಬಿರವು  ಕಡಬ ಪರಿಸರದ ವಿವಿಧ ಗ್ರಾಮಗಳ ಕೇಂದ್ರಗಳಲ್ಲಿ  ನಡೆಯಿತು.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ   ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ  ಉದ್ಯಮಿ ಅಜಿತ್ ಶೆಟ್ಟಿ ಕಡಬ  ಮಾರಣಾಂತಿಕವಾದ ರೇಬಿಸ್ ರೋಗದ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನೂ ಕೂಡ ಜಾಗೃತಿ ಮೂಡಿಲ್ಲ. ರೇಬಿಸ್ ಸೋಂಕು ತಗುಲಿದ ಪ್ರಾಣಿ ಮನುಷ್ಯರಿಗೆ ಕಡಿದರೆ ಪ್ರಾಣಾಪಾಯ ಖಂಡಿತ. ಆದುದರಿಂದ ನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ಮುಖ್ಯಅತಿಥಿಯಾಗಿದ್ದ ಕಡಬ ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|ಅಜಿತ್ ಎಂ.ಸಿ. ಮಾತನಾಡಿ  ಇಲಾಖೆಯ ಸಹಕಾರದೊಂದಿಗೆ ಜೇಸಿ ಸಂಸ್ಥೆಯು ರೇಬಿಸ್ ಲಸಿಕೆ ನೀಡುವ ಜನಪರ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ.  ಪ್ರತಿ ವರ್ಷ ಈ ಕಾರ್ಯಕ್ರಮವನ್ನು ನಡೆಸಲು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.  ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಶುಭಹಾರೈಸಿದರು. ಜೇಸಿ ಘಟಕಾಧ್ಯಕ್ಷೆ ವಿಶ್ರುತಾ ರಾಜೇಶ್ ಅವರು ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮ ನಿರ್ದೇಶಕ ಜೇಮ್ಸ್ ಕ್ರಿಶಲ್ ಡಿ’ಸೋಜ ಉಪಸ್ಥಿತರಿದ್ದರು.  ಜೇಸಿ ವಲಯಾಧಿಕಾರಿ ಕಾಶೀನಾಥ್ ಗೋಗಟೆ ಅವರು ಸ್ವಾಗತಿಸಿ, ಘಟಕದ ಕಾರ್ಯದರ್ಶಿ ನವ್ಯಾಕೃಷ್ಣ  ವಂದಿಸಿದರು.

Also Read  ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ 'ಕನ್ನಡ ಬೋರ್ಡ್' ಪ್ರತ್ಯಕ್ಷ

ವಿವಿಧ ಗ್ರಾಮಗಳಲ್ಲಿ ಸಂಚಾರ:

ಉದ್ಘಾಟನ ಸಮಾರಂಭದ ಬಳಿಕ ಕಡಬ ಪಟ್ಟಣ ಪಂಚಾಯಿತಿ  ವ್ಯಾಪ್ತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮ, ಬಂಟ್ರ, ೧೦೨ ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ ಹಾಗೂ  ಬಲ್ಯ ಗ್ರಾಮಗಳ ವಿವಿಧ ಕೇಂದ್ರಗಳಗಲ್ಲಿ  ಸಂಚರಿಸಿದ ಲಸಿಕಾ ತಂಡವು ಒಟ್ಟು  ೪೩೫ ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆ ನೀಡಿತು. ಕಡಬ ಪಶು ವೈದ್ಯಾಧಿಕಾರಿ ಡಾ|ಅಜಿತ್ ಎಂ.ಸಿ. ಹಾಗೂ ಸುಬ್ರಹ್ಮಣ್ಯ ಪಶು ವೈದ್ಯಾಧಿಕಾರಿ ಡಾ|ಚೇತನ್‌ಕುಮಾರ್ ಅವರ ನೇತೃತ್ವದಲ್ಲಿ  ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಹನುಮಂತ ಪಾವಿ, ವೀರೇಶ್, ರವಿತೇಜ ಹಾಗೂ ಸಂಪತ್‌ಕುಮಾರ್ ಲಸಿಕೆ ನೀಡಿದರು. ಕೇಪು ಶ್ರೀಲಕ್ಷ್ಮೀ  ಜನಾರ್ದನ ಯುವಕ ಮಂಡಲದ ಅಧ್ಯಕ್ಷ ಶರತ್ ನಂದುಗುರಿ ಹಾಗೂ ಕಾರ್ಯದರ್ಶಿ ವಿಜೇತ್ ಅವರ ನೇತೃತ್ವದಲ್ಲಿ  ಯುವಕ ಮಂಡಲದ ಸದಸ್ಯರು ಸ್ವಯಂಸೇವಕರಾಗಿ ಸಹಕರಿಸಿದರು.  (ಅಜಿತ್ ಶೆಟ್ಟಿ ಕಡಬ ಅವರು ಕಾರ್ಯಕ್ರಮವನ್ನು  ಉದ್ಘಾಟಿಸಿದರು:ಫೋಟೋ ಫೈಲ್ ನೇಮ್ ೨೭ಕೆಡಿಬಿ ಯುಜಿ)

Also Read  ಪುತ್ತೂರಿನ ರಾಮಕುಂಜದಲ್ಲಿ ಮೀನುಕೃಷಿಕರ ದಿನಾಚರಣೆ

error: Content is protected !!
Scroll to Top