ಮಹಾಕುಂಭ ಮೇಳದಲ್ಲಿ ಸ್ಪೀಕರ್ ಯುಟಿ ಖಾದರ್

(ನ್ಯೂಸ್ ಕಡಬ) newskadaba.com ಜ.25  ಪ್ರಯಾಗ್ ರಾಜ್: ತನ್ನ ಸರಳತೆ, ಜಾತ್ಯತೀತ ತತ್ವಗಳ ಅನುಸರಣೆಯಿಂದ ಹೆಸರುವಾಸಿಯಾಗಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಏಕತೆ ಮತ್ತು ಕೋಮು ಸಾಮರಸ್ಯದ ಸಂಕೇತವಾಗಿ ಶುಕ್ರವಾರ ಹಿಂದೂ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ.

ಮುಸ್ಲಿಂ ಆಗಿದ್ದರೂ ನಾಗ ಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದು, ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವ ಖಾದರ್ ಸಾಧುಗಳೊಂದಿಗೆ ಬೆರೆತು, ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭ ಮೇಳದಲ್ಲಿ ಅದ್ಬುತ ಕ್ಷಣಗಳನ್ನು ಕಳೆದಿದ್ದಾರೆ. ದಕ್ಷಿಣ ಕನ್ನಡದ ಆಪ್ತ ಸ್ನೇಹಿತರ ಜೊತೆಗೂಡಿ ಕುಂಭಮೇಳದ ಮಹಾನುಭವವನ್ನು ಪಡೆದಿದ್ದಾರೆ.

Also Read  ದೇವಸ್ಥಾನದಲ್ಲಿ 70,000 ಮೌಲ್ಯದ ನಗದು, ಇತರ ಬೆಲೆಬಾಳುವ ವಸ್ತುಗಳ ಕಳವು

ಎಲ್ಲಾರಲ್ಲೂ ಬೆರೆಯುವ ಮತ್ತು ಪರಸ್ಪರ ಧರ್ಮಗಳನ್ನು ಗೌರವಿಸುವ ಖಾದರ್ ಅವರ ನಿದರ್ಶನ ಇದೇ ಮೊದಲಲ್ಲ. ಮಂಗಳೂರಿನಲ್ಲಿ ಹಿಂದೂ ದೇವಾಲಯಗಳು, ಕ್ರಿಶ್ಚಿಯನ್ ಚರ್ಚ್‌ಗಳು ಮತ್ತು ಜೈನ ಆರಾಧನಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.

error: Content is protected !!
Scroll to Top