ಬೆಂಗಳೂರು: HAL ವಿಮಾನ ನಿಲ್ದಾಣವನ್ನು ಮತ್ತೆ ತೆರೆಯಲು ಸಂಸದ ತೇಜಸ್ವಿ ಸೂರ್ಯ ಒತ್ತಾಯ

(ನ್ಯೂಸ್ ಕಡಬ) newskadaba.com ಜ.25 ಬೆಂಗಳೂರು: HAL ವಿಮಾನ ನಿಲ್ದಾಣವನ್ನು ಮತ್ತೆ ತೆರೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುಬೇಕೆಂದು ಸಂಸದ ತೇಜಸ್ವಿ ಸೂರ್ಯ ನವದೆಹಲಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಮಾಡಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆಯ್ದ ಸಂಸತ್ ಸದಸ್ಯರನ್ನು ಒಳಗೊಂಡಿದ್ದು, ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚವನ್ನು ಲೆಕ್ಕಪರಿಶೋಧನೆ ಕೆಲಸ ಮಾಡುತ್ತದೆ. TNIE ಜೊತೆ ಮಾತನಾಡಿದ ತೇಜಸ್ವಿಸೂರ್ಯ, ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಲು ನಡೆಯುತ್ತಿರುವ ಕ್ರಮದೊಂದಿಗೆ ಈ ಮನವಿಯನ್ನು ಪರಿಗಣಿಸಬಹುದು ಎಂದು ಹೇಳಿದರು.

ನಗರದಲ್ಲಿ ಮೂರು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಿದರೆ ಬೆಂಗಳೂರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ನ್ಯೂಯಾರ್ಕ್, ಪ್ಯಾರಿಸ್ ಮತ್ತು ಲಂಡನ್‌ನಂತಹ ಜಾಗತಿಕ ನಗರಗಳು ಬಹು ವಿಮಾನ ನಿಲ್ದಾಣಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನ MD ಮತ್ತು CAO ಹರಿ ಮಾರಾರ್ ಅವರನ್ನು ಎರಡು ವಾರಗಳ ಹಿಂದೆ ಭೇಟಿಯಾಗಿದ್ದಾಗಿ ಸಂಸದರು ಉಲ್ಲೇಖಿಸಿದ್ದಾರೆ.

Also Read  ಮಕ್ಕಾ ಮಸೀದಿ ಅವಹೇಳನ ಪ್ರಕರಣದಲ್ಲಿ ಅಮಾಯಕ ಯುವಕರ ಫಿಕ್ಸ್ ಆರೋಪ ► ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ಬಂದ್ ಗೆ ಕರೆ

error: Content is protected !!
Scroll to Top