ಮರ್ಧಾಳ ಗುಡ್ ಶೆಫರ್ಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಮಾಹಿತಿ ಕಾರ್ಯಾಗಾರ ಮಗುವಿನ ಜನುಮದಿನ ಗಿಡನಾಟಿ ಮಾಡಿ ಆಚರಿಸಿ- ವಲಯಾರಣ್ಯಾಧಿಕಾರಿ ಅಪೂರ್ವ ಮಾವಿನಕಟ್ಟೆ ಸಲಹೆ

(ನ್ಯೂಸ್ ಕಡಬ) newskadaba.com ಜ. 23. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ವತಿಯಿಂದ ಮರ್ಧಾಳದ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ‘ಪರಿಸರದ ಮಹತ್ವ- ಮಕ್ಕಳ ಜವಾಬ್ದಾರಿ ಮಾಹಿತಿ’ ಕಾರ್ಯಕ್ರಮವು ನಡೆಯಿತು.

ಸುಬ್ರಹ್ಮಣ್ಶ ವಲಯ ಅರಣ್ಶಾಧಿಕಾರಿ ಅಪೂರ್ವ ಮಾವಿನಕಟ್ಟೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ನಡೆಸಿರುವ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ತಾಲೂಕಿನ ಅನೇಕ ಶಾಲೆಗಳಲ್ಲಿ ಮಾಹಿತಿಗಾರನಾಗಿ ಪಾಲ್ಗೊಂಡಿದ್ದೇನೆ. ಗುಡ್ ಶೆಫರ್ಡ್ ಆಂಗ್ಲಮಾದ್ಶಮ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ. ಮಾನವ ಜೀವನದಲ್ಲಿ ಬಹುಮುಖ್ಯ ಭಾಗವಾಗಿ ಪರಿಸರವಿದೆ. ಅದರಲ್ಲಿಯೂ ಗಿಡಮರಗಳ ಬೆಳೆದು ಪೋಷಿಸುವುದು ಪ್ರತಿಯೊಬ್ಬನ ಜವಾಬ್ದಾರಿ ಹಾಗೂ ಕರ್ತವ್ಶವಾಗಿದೆ. ಪರಿಸರದಿಂದ ಶುದ್ದಗಾಳಿ ಪಡೆದರೆ ಮಾನವ ಹಾಗೂ ಪ್ರತೀ ಜೀವಿಯೂ ಆರೋಗ್ಶವಂತ ಜೀವನ ನಡೆಸಲು ಸಾಧ್ಯವಾಗುತ್ತದೆ. ಬುದ್ಧಿಶಕ್ತಿ ಹೊಂದಿರುವ ಪ್ರಜ್ಞಾವಂತ ವ್ಶಕ್ತಿ ತನ್ನ ಮಗುವಿನ ಹುಟ್ಟಿದ ದಿನವನ್ನು ಗಿಡ ನೆಟ್ಟು ಆಚರಿಸಿದರೆ ಪ್ರತೀ ವರ್ಷ ಅದೆಷ್ಟೋ ಗಿಡಗಳು ಪರಿಸರಲ್ಲಿ ಬೆಳೆಯಲು ಸಾಧ್ಶವಾಗುತ್ತದೆ. ಪ್ರತೀ ಮಕ್ಕಳೂ ಇದನ್ನು ಪೋಷಕರಿಗೆ ಅರ್ಥಪಡಿಸುವ ಕಾರ್ಯವಾಗಬೇಕು ಎಂದರು.

Also Read  ಉಡುಪಿ: ಚಲಿಸುತ್ತಿದ್ದ ಕಂಟೇನರ್ ಲಾರಿ ತಾಗಿ ರಸ್ತೆಗೆ ಬಿದ್ದ ಮರದ ಗೆಲ್ಲು ➤ ಕೆಲಕಾಲ ಸಂಚಾರ ಅಸ್ತವ್ಯಸ್ತ

ಆಂಗ್ಲಮಾಧ್ಶಮ ಶಾಲಾ ವಠಾರದಲ್ಲಿ ಈದಿನ ಜನುಮದಿನವನ್ನು ಆಚರಿಸುತ್ತಿರುವ ಕುಮಾರಿ ನೇಹಾ ಹಣ್ಣಿನ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದಳು. ಶಾಲಾ ಮಕ್ಕಳಿಗೆ ಪರಿಸರದ ಕುರಿತಾದ ಪ್ರಬಂಧ, ಚಿತ್ರಕಲೆ ಹಾಗೂ ಎಲೆ ಗುರುತಿಸುವ ಸ್ಪರ್ಧೆ ಏರ್ಪಡಿಸಿದ್ದು ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ ಶೆಫರ್ಡ್ ಆಂಗ್ಲಮಾಧ್ಶಮ ಶಾಲಾ ಆಡಳಿತ ಸಮಿತಿ ಅಧ್ಶಕ್ಷರಾದ ಸುರೇಶ್ ರವರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ತೋಮಸ್ ವಿ.ವಿ, ಮುಖ್ಯೋಪಾಧ್ಯಾಯರಾದ ಪ್ರಿಯಾಕುಮಾರಿ, ಶಾಲಾ ಶೈಕ್ಷಣಿಕ ಸಲಹೆಗಾರರಾದ ಮೇರಿ ಚೆರಿಯನ್, ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ವಿರೂಪಾಕ್ಷಪ್ಪ, ಸೇವಾಪ್ರತಿನಿಧಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

Also Read  ಸಚಿವ ಮಂಕಾಳ್ ವೈದ್ಯರ ಅಭಿನಂದನಾ ಬ್ಯಾನರ್ ಗೆ ಹಾನಿ

ಶಿಕ್ಷಕಿ ಪದ್ಮಾ ಮಂಜುನಾಥ್ ಸ್ವಾಗತಿಸಿ ಲೀನಾ ಶಾಂತರಾಮ್ ಧನ್ಯವಾದಗೈದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top