ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್

(ನ್ಯೂಸ್ ಕಡಬ) newskadaba.com ಜ.21 ವಾಷಿಂಗ್ಟನ್‌ : ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ಒಳಗೆ ಡೊನಾಲ್ಡ್‌ ಟ್ರಂಪ್‌ ಕೆಲ ಮಹತ್ವದ ನಿರ್ಣಯಗಳಿಗೆ ಸಹಿ ಹಾಕಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಅಧಿಕೃತವಾಗಿ ಹೊರ ನಡೆಯುವ ಆದೇಶಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ್ದಾರೆ. ಸದ್ಯ ಅವರು ಓವೆಲ್‌ನ ಆಫೀಸ್‌ನಲ್ಲಿ ಈ ಆದೇಶಕ್ಕೆ ಸಹಿ ಮಾಡಿರುವುದು ತಿಳಿದು ಬಂದಿದೆ. ಟ್ರಂಪ್‌ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗಲೂ ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿ ಅಧಿಕೃತವಾಗಿ WHOನಿಂದ ಹಿಂದೆ ಸರಿದಿದ್ದರು. ನಂತರ ಜೋ ಬೈಡನ್‌ ಅಧಿಕಾರವಧಿಯಲ್ಲಿ ಈ ಆದೇಶವನ್ನು ರದ್ದುಗೊಳಿಸಿದ್ದರು.

Also Read  Breaking News ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ ಎರಡನೇ ಅಲೆ ➤ ದ.ಕ ಜಿಲ್ಲೆ ಸೇರಿದಂತೆ 8 ಜಿಲ್ಲೆಗಳು ಡೇಂಜರ್ ಝೋನ್..❗

ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದ್ದರು. ಅಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಮಾಹಿತಿ ರವಾನೆ ಮಾಡಿ, ಜುಲೈ 8, 2021 ರಿಂದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿತ್ತು. ಡಬ್ಲ್ಯೂ ಎಚ್ ಒ ಗೆ ಅಮೆರಿಕ ನೀಡುವ ಅನುದಾನವನ್ನು ನಾವು ನಿಲ್ಲಿಸುತ್ತೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದರು. ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಪ್ರತಿ ವರ್ಷ 300 ಕೋಟಿ ಅನುದಾನ ನೀಡುತ್ತಿದೆ. ಅಮೆರಿಕ 3 ಸಾವಿರ ಕೋಟಿ ಅನುದಾನ ನೀಡುತ್ತಿದೆ.

Also Read  ಬೆಂಗಳೂರು: ಶೀಘ್ರದಲ್ಲೇ ಆಟೋ ದರಲ್ಲೂ ಏರಿಕೆ, ಪ್ರತಿ ಕಿ.ಮೀಗೆ 5 ರೂ. ಹೆಚ್ಚಳ ಸಾಧ್ಯತೆ..!

 

 

error: Content is protected !!
Scroll to Top