ರಾಜ್ಯದಲ್ಲಿ ಮತ್ತೆ ಬಿಯರ್ ಬೆಲೆ ಏರಿಕೆ, ಸಕ್ಕರೆ ಅಂಶ ಕಡಿಮೆ ಮಾಡಲು ಬ್ರೂವರೀಸ್‌ಗಳಿಗೆ ಸೂಚನೆ!

(ನ್ಯೂಸ್ ಕಡಬ) newskadaba.com ಜ.21ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಸೋಮವಾರದಿಂದಲೇ ಪರಿಷ್ಕೃತ ಬೆಲೆಗಳು ಸೋಮವಾರದಿಂದ ಜಾರಿಗೆ ಬಂದಿವೆ. ಬಿಯರ್ ಮೇಲಿನ ಸುಂಕ ಹೆಚ್ಚಳದ ಕುರಿತು ರಾಜ್ಯ ಸರ್ಕಾರ ಆಗಸ್ಟ್ 23, 2024 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ಕುರಿತು ಅಂತಿಮ ಅಧಿಸೂಚನೆಯನ್ನು ಜನವರಿ 8 ರಂದು ಹೊರಡಿಸಲಾಗಿತ್ತು.

ಇನ್ನು ಮುಂದೆ ಬಿಯರ್ ಬೆಲೆಗಳು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ಅಂಶವನ್ನು ಅವಲಂಬಿಸಿ ಇದನ್ನು ಎರಡು ಸ್ಲ್ಯಾಬ್‌ಗಳಾಗಿ ವರ್ಗೀಕರಿಸಲಾಗಿದೆ. ಅಲ್ಕೋಹಾಲ್ ಅಂಶ ಶೇ.5ಕ್ಕಿಂತ ಕಡಿಮೆ ಇರುವ ಅಥವಾ ಅದಕ್ಕೆ ಸಮಾನವಾಗಿರುವ ಮೈಲ್ಡ್ ಬಿಯರ್ ಬೆಲೆಯನ್ನು ಪ್ರತಿ ಬಲ್ಕ್ ಲೀಟರ್ (pbl) ಗೆ 12 ರೂ ಮತ್ತು ಶೇ 5-8 ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಟ್ರಾಂಗ್ ಬಿಯರ್‌ಗಳಿಗೆ ರೂ. 20 (Pbl) ಎಂದು ನಿಗದಿಪಡಿಸಲಾಗಿದೆ.

Also Read  ಬಾಲಮಂದಿರದಿಂದ ಪರಾರಿಯಾಗಿ ಕಳ್ಳತನ 4 ಅಪ್ರಾಪ್ತರ ಬಂಧನ

ಈ ಹಿಂದೆ ಆಲ್ಕೋಹಾಲ್ ಅಂಶವನ್ನು ಲೆಕ್ಕಿಸದೆ ಎಲ್ಲಾ ಬಿಯರ್ ಮೇಲಿನ ಅಬಕಾರಿ ಸುಂಕ ರೂ. 10 pbl ಆಗಿತ್ತು. ಎಲ್ಲಾ ಸ್ಟ್ರಾಂಗ್ ಬಿಯರ್‌ಗಳ ಕನಿಷ್ಠ ಬೆಲೆ ರೂ. 145 ರೂ.ಗಿಂತ ಕಡಿಮೆ ಇರುವುದಿಲ್ಲ. ರೂ. 100 ಗೆ ಸಿಗುತ್ತಿದ್ದ Legend beer ಬೆಲೆ ಈಗ ರೂ.145 ಆಗಿದೆ.

error: Content is protected !!
Scroll to Top