(ನ್ಯೂಸ್ ಕಡಬ) newskadaba.com ಜ.20 ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೇರಳ ಉದ್ಯಮಿಯ ಮೇಲೆ ನಾಲ್ವರು ದರೋಡೆಕೋರರ ತಂಡವೊಂದು ಹಲ್ಲೆ ನಡೆಸಿ, ಅವರ ಕಾರು ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹಗಲು ಹೊತ್ತಿನಲ್ಲಿ ಜನನಿಬಿಡ ರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು, ಕೆಲವು ದಾರಿಹೋಕರು ತೆಗೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಮತ್ತು ರಾಜ್ಯದಲ್ಲಿ ತೀವ್ರ ಕಳವಳ ಮೂಡಿಸಿದೆ.
ಪೊಲೀಸರ ಪ್ರಕಾರ, ಸೋಮವಾರ ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ನಾಲ್ವರು ಮುಸುಕುಧಾರಿಗಳ ತಂಡ, ಕೇರಳದ ಉದ್ಯಮಿ ಸೂಫಿಯನ್ನು ಅಡ್ಡಗಟ್ಟಿದೆ. ದರೋಡೆಕೋರರು ಉದ್ಯಮಿಯನ್ನು ವಾಹನದಿಂದ ಹೊರಗೆಳೆದು, ಬೆದರಿಸಿ ತಳ್ಳಿದ್ದಾರೆ. ನಂತರ ಅವರ ಬಳಿ ಇದ್ದ ನಗದು ಕಿತ್ತುಕೊಂಡು ಕಾರಿನೊಂದಿಗೆ ಪರಾರಿಯಾಗಿದ್ದಾರೆ.