ಮದ್ಯಪ್ರಿಯರಿಗೆ ಶಾಕ್‌, ಈ 6 ಬಿಯರ್‌ಗಳ ಬೆಲೆ 10 ರಿಂದ 45 ರೂಪಾಯಿವರೆಗೆ ಏರಿಕೆ

(ನ್ಯೂಸ್ ಕಡಬ) newskadaba.com ಜ.20  ಬೆಂಗಳೂರು: ನಿರೀಕ್ಷೆಯಂತೆಯೇ ರಾಜ್ಯದಲ್ಲಿ ಬಿಯರ್‌ಗಳ ಬೆಲೆಯಲ್ಲಿ ಅಬಕಾರಿ ಇಲಾಖೆ ದೊಡ್ಡ ಮಟ್ಟದ ಏರಿಕೆ ಮಾಡಿದೆ. ಹಾಗಂತ ಎಲ್ಲಾ ಬ್ರ್ಯಾಂಡ್‌ನ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕೈಗೆಟುವಂತಿದ್ದ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದೆ.  10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ‌ ಹೆಚ್ಚಳ ಮಾಡಿದೆ. ಕಳೆದ ಒಂದೇ ವರ್ಷದಲ್ಲಿ ಕರ್ನಾಟಕದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

Also Read  ಸಾಮಾಜಿಕ ಜಾಲತಾಣದಲ್ಲಿ ಮಾನಸಿ ಸುಧೀರ್ ಹವಾ ➤ ಗಣೇಶನನ್ನು ಕನ್ನಡ ಸ್ವರಾಕ್ಷರಗಳಲ್ಲಿ ವರ್ಣಿಸಿದ ಕಲಾವಿದೆ

ಇನ್ನು ಯಾವೆಲ್ಲಾ ಬಿಯರ್‌ಗಳಿಗೆ ಬೆಲೆ ಏರಿಕೆ ಮಾಡಲಾಗಿದೆ ಅನ್ನೋದನ್ನ ನೋಡೋದಾದರೆ, ಲಜೆಂಡ್‌ ಬಿಯರ್‌ ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಇದು ಮಾರಾಟವಾಗಲಿದೆ.

error: Content is protected !!
Scroll to Top