(ನ್ಯೂಸ್ ಕಡಬ) newskadaba.com ಜ.20: ನಕಲಿ ಮದ್ಯ ಸೇವಿಸಿದ ಶಂಕೆಯ ಮೇಲೆ ಏಳು ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ವರದಿಯಾಗಿದೆ. ನಾಲ್ಕು ದಿನಗಳ ಏಳು ಜನರ ಮೃತಪಟ್ಟಿದ್ದು ಈಗಾಗಲೇ ಅವರ ಶವ ಸಂಸ್ಕಾರ ಮಾಡಲಾಗಿದೆ. ಲೌರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೌರ್ಯ ಸುಮನ್ ಹೇಳಿದ್ದಾರೆ.
ಸ್ಥಳೀಯರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು, ಆದರೆ ಕನಿಷ್ಠ ಎರಡು ಸಾವುಗಳಿಗೆ ಕಾರಣ ಕಳ್ಳಬಟ್ಟಿ ಅಲ್ಲ ಎಂದು ತಿಳಿಸಿದ್ದಾರೆ. ಒಬ್ಬರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬರಿಗೆ ಪಾರ್ಶ್ವವಾಯು ದಾಳಿಯಾಗಿದೆ ಎಂದು ಅವರು ಹೇಳಿದರು.ಮೊದಲ ಸಾವು ಜ.15 ರಂದು ಸಂಭವಿಸಿದೆ, ಆದರೆ ಘಟನೆಯ ಬಗ್ಗೆ ನಮಗೆ ಇಂದು ಮಾತ್ರ ತಿಳಿದುಬಂದಿದೆ. ಉಳಿದ ಐದು ಸಾವುಗಳಿಗೆ ಕಾರಣ ಸ್ಪಷ್ಟವಾಗಿಲ್ಲ ಏಕೆಂದರೆ ಪೊಲೀಸರಿಗೆ ತಿಳಿಸುವ ಮೊದಲೇ ಎಲ್ಲಾ ಏಳು ಶವಗಳನ್ನು ದಹನ ಮಾಡಲಾಗಿದೆ ಎಂದರು.