ಮುಡಾ ಹಗರಣ ₹300 ಕೋಟಿ ಆಸ್ತಿ ಇ.ಡಿ ವಶಕ್ಕೆ

(ನ್ಯೂಸ್ ಕಡಬ) newskadaba.com ಜ.18  : ಮೈಸೂರು:  ತಪ್ಪುಗಳು ಆಗಿವೆ ಎಂಬುದು ಇಡಿ ವರದಿಯಲ್ಲಿ ಗೊತ್ತಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.

ಇಡಿಯಿಂದ ಮುಡಾ ಆಸ್ತಿ ಜಪ್ತಿ ಮಾಡಿದ ವಿಚಾರವಾಗಿ ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಮುಡಾ ಆರೋಪ ಕೇಳಿ ಬಂದ ದಿನವೇ ನಾವು ಸಿಎಂ ರಾಜೀನಾಮೆ ಕೇಳಿದ್ದೇವು. ಆದರೆ ಸಿಎಂ ತನಿಖೆಯಾಗಲಿ ಎಂದು ಹೇಳುತ್ತಿದ್ದರು. ಇದೀಗ ಇಡಿಯೇ ತನಿಖೆ ಮಾಡಿ ಅಕ್ರಮ ಆಗಿರುವುದು ಬಯಲಿಗೆಳೆದಿದೆ. ಆ ಕುರಿತು ವರದಿ ಸಹ ಬಿಡುಗಡೆ ಮಾಡಿದೆ. ಈಗಲಾಗದ್ರೂ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಸಹಕರಿಸಬೇಕು ಎಂದರು.

Also Read  ಮಗನಿಗೆ ಕೊರೋನಾ ದೃಢ ➤ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಹೋಂ ಕ್ವಾರಂಟೈನ್

ಮುಡಾ ಪ್ರಕರಣದಲ್ಲಿ ಸಂಪೂರ್ಣ ತನಿಖೆ ಮುಗಿದ ಮೇಲೆ ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಮತ್ತೆ ಅಧಿಕಾರ ಪಡೆದುಕೊಳ್ಳಲಿ. ಆದರೆ ತನಿಖೆ ಬಳಿಕ ನೋಡೋಣ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಇಡಿ ವರದಿ ಬಳಿಕವೂ ರಾಜೀನಾಮೆ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ ರಾಜೀನಾಮೆಗೆ ಒತ್ತಾಯಿಸಿ ಮತ್ತೆ ಹೋರಾಟ ಮಾಡುತ್ತೇವೆ. ಇದು ಮುಡಾ ಕ್ಲೀನ್ ಆಗುವ ಮೊದಲ ಹೆಜ್ಜೆಯಾಗಿದೆ. ಮುಡಾ ಸಂಪೂರ್ಣವಾಗಿ ಕ್ಲೀನ್ ಆಗಲು ಇನ್ನೂ ಎರಡು ವರ್ಷ ಬೇಕಿದೆ ಎಂದರು.

error: Content is protected !!
Scroll to Top