ಮಹಾಕುಂಭದಲ್ಲಿ ಬಾಂಬ್ ಬೆದರಿಕೆ, ಸೆಕ್ಷನ್‌ 163 ಜಾರಿ

(ನ್ಯೂಸ್ ಕಡಬ) newskadaba.com ಜ.18  : ಮಹಾಕುಂಭ ಮೇಳದಲ್ಲಿ ಶುಕ್ರವಾರ ಮಧ್ಯಾಹ್ನ ಬಾಂಬ್ ಇದೆ ಅಂತ ಸುದ್ದಿ ಹಬ್ಬಿ ಪೊಲೀಸ್ ಇಲಾಖೆ ತಲ್ಲಣಗೊಂಡಿತು. ಸುದ್ದಿ ಸಿಗ್ತಿದ್ದಂಗೆ ಪೊಲೀಸರು ಕಾರ್ಯಪ್ರವೃತ್ತರಾಗಿ ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್), ವಿಧ್ವಂಸಕ ಕೃತ್ಯ ತಡೆ ತಂಡ (ಎಎಸ್ ಚೆಕ್) ಸೇರಿದಂತೆ ಹಲವು ತಂಡಗಳು ಸೆಕ್ಟರ್-18 ತಲುಪಿದವು.

ಭದ್ರತಾ ಸಂಸ್ಥೆಗಳು ಸಂಪೂರ್ಣ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ಆರಂಭಿಸಿದವು, ಇದರಿಂದಾಗಿ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಾಕಷ್ಟು ತನಿಖೆ ನಡೆಸಿದ ನಂತರ, ಈ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಈಗ ಹಬ್ಬಗಳು ಮತ್ತು ಪ್ರಮುಖ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ 163ನೇ ಕಲಂ ಅನ್ನು ಜಾರಿಗೊಳಿಸಲಾಗಿದೆ.

Also Read  ಬೆಳ್ತಂಗಡಿ: ಉಜಿರೆಯ ಲಾಡ್ಜ್ ಗಳ ಮೇಲೆ ವಿಶೇಷ ಪೊಲೀಸ ತಂಡ ದಾಳಿ..!

error: Content is protected !!
Scroll to Top