ಕಡಬ: ಹಾಡಹಗಲೇ ನಗದು, ಚಿನ್ನಾಭರಣ ದೋಚಿದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಡಬ: ಮನೆಯೊಂದರಿಂದ ಹಾಡಹಗಲೇ ನಗದು ಮತ್ತು ಚಿನ್ನಾಭರಣ ದೋಚಿದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐದೇ ದಿನದಲ್ಲಿ ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ.  ಕರ್ಮಾಯಿ ನಿವಾಸಿ ಸಿನು ಕುರಿಯನ್ ಬಂಧಿತ ಆರೋಪಿ. ಕಳವಾಗಿದ್ದ ಚಿನ್ನವನ್ನು ಹಾಗೂ ಸ್ವಲ್ಪ ಹಣವನ್ನೂ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

102 ನೆಕ್ಕಿಲಾಡಿ ಗ್ರಾಮದ ಮರ್ದಾಳ ಬಳಿಯ ನಿವಾಸಿ ಆಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ ಅವರು ಭಾನುವಾರ ಪತ್ನಿ ಹಾಗೂ ಮಗನೊಂದಿಗೆ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದರು. ಪ್ರಾರ್ಥನೆ ಬಳಿಕ ಮನೆಗೆ ಹಿಂತಿರುಗಿದಾದ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಳ್ಳತನ ನಡೆದಿರುವ ಮನೆಯ ಸಮೀಪವಿರುವ ಮನೆಯ ಯುವಕ ಸಿನು ಕುರಿಯನ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಹಲವು ಮಹತ್ವದ ಸುಳಿವುಗಳ ಆಧಾರದ ಮೇರೆಗೆ ಸಿನು ಕುರಿಯನ್‌ನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದರು.

Also Read  ರಾಮ ಮಂದಿರ ನಿರ್ಮಾಣಕ್ಕೆ ಉಡುಪಿ ಪೇಜಾವರ ಮಠದದಿಂದ 5 ಲಕ್ಷ ರೂ. ದೇಣಿಗೆ

ಆರೋಪಿ ಸಿನು ಕುರಿಯನ್ ಸಾಲದ ಸುಳಿಯಲ್ಲಿ ಸಿಲುಕಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈತ ಕಡಬದ ಜವಳಿ ಮಳಿಗೆಯಲ್ಲಿ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಆರೋಪಿ ಸಿನು ಕುರಿಯನ್ ಕಳ್ಳತನ ಮಾಡಿದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ರೈಲು ಹಳಿಯತ್ತ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

Also Read  ಎಸ್ಡಿಪಿಐ ಆತೂರು ವಲಯ ಸಮಿತಿ ಕಾರ್ಯಕರ್ತರ ಸಭೆ ➤ ಫ್ಯಾಸಿಸ್ಟರನ್ನು ಸೋಲಿಸುವುದೇ ನಮ್ಮ ಗುರಿ - ಅಶ್ರಫ್ ಮಾಚಾರ್

error: Content is protected !!
Scroll to Top