ಮಂಗಳೂರು: ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ ಮತ್ತೆರಡು ಬಿಸಿನೆಸ್ ಸೆಂಟರ್‌ಗಳು ಶೀಘ್ರದಲ್ಲೇ ಪ್ರಾರಂಭ

(ನ್ಯೂಸ್ ಕಡಬ)com ಜ.15: ಇದೀಗ ಕೆಲ ವರ್ಷಗಳಿಂದ, ಅದರಲ್ಲೂ ಕೋವಿಡ್ ನಂತರದ ಸನ್ನಿವೇಶ ಬದಲಾಗಿದೆ. ಊರಿನಿಂದ ದೂರ ಉಳಿದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಸಾವಿರಾರು ಉದ್ಯೋಗಿಗಳು ಕೋವಿಡ್ ಬಳಿಕ ಮತ್ತೆ ಊರಿಗೆ ಮರಳಿದ್ದು ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.ವರ್ಕ್ ಪ್ರಮ್ ಹೋಮ್ ಮಾಡುತ್ತಿದ್ದ ಅವರಿಗೆ ಹೈಸ್ಪೀಡ್ ಇಂಟರ್ನೆಟ್, ತಡೆರಹಿತ ವಿದ್ಯುತ್ ಕನೆಕ್ಷನ್ ಮೊದಲಾದ ಸಮಸ್ಯೆ ಉಂಟಾಗಿತ್ತು. ಈ ಸಂಧರ್ಭ ‘ವರ್ಟೆಕ್ಸ್ ವರ್ಕ್ಸ್ಪೇಸ್” ಹೊಸ -ಅವಕಾಶ ಕಲ್ಪಿಸಿತು ಮಾತ್ರವಲ್ಲದೆ ಬೇಕಾದ ಎಲ್ಲಾ ಉಪಕರಣಗಳು ಮತ್ತು ಉಪಯುಕ್ತತೆಗಳು ಇಲ್ಲಿ ಒದಗಿಸಿಕೊಟ್ಟಿತು.

Nk Cake House

ಇನ್‌ವೆಸ್ಟ್ ಸ್ಮಾರ್ಟ್-ಇನ್‌ವೆಸ್ಟ್ ಇನ್ ಮಂಗಳೂರು: ರಾಜ್ಯ ಸರಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್’ ಕಾರ್ಯಕ್ರಮ-ಯೋಜನೆಯನ್ನು ಸ್ಮಾರ್ಟ್‌ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತು.

Also Read  ಕೆಲಸದ ವೇಳೆ ಕುಸಿದುಬಿದ್ದು ಕಾರ್ಮಿಕ ಸಾವು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದ ದುರುಳ

ಇದರಿಂದ ಮಂಗಳೂರು ನಗರದಲ್ಲಿ ಕಳೆದ 3 ವರ್ಷಗಳಲ್ಲಿ 150ಕ್ಕಿಂತಲೂ ಹೊಸ ಐಟಿ, ಕಾಪೋರೇಟ್ ಸಂಸ್ಥೆಗಳು ತಮ್ಮ ನೆಲೆಯನ್ನು ಸ್ಥಾಪಿಸಿದ್ದು ಇದರಿಂದ -6000ಕ್ಕೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿವೆ. ಇದೀಗ ಮತ್ತಷ್ಟು ಐಟಿ ಕಂಪೆನಿಗಳು ಮಂಗಳೂರಿಗೆ ಬರಲು =ಉತ್ಸುಕತೆಯನ್ನು ಹೊಂದಿದ್ದು ವರ್ಕ್‌ಸ್ಪೇಸ್‌ಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ನಗರದ ಬಿಜೈ- ಕಾಪಿಕಾಡ್‌ನಲ್ಲಿ ಅಶೋಕಾ ಬ್ಯುಸಿನೆಸ್ ಸೆಂಟರ್ ಯೋಜನೆಯ ನಿರ್ಮಾಣ ಭರದಿಂದ ನಡೆಯುತ್ತಿದೆ. ಈಗಾಗಲೇ ಶೇ.50ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಈ ಯೋಜನೆಯನ್ನು 2025ರ ಮಧ್ಯಾಂತರದಲ್ಲಿ ಹಸ್ತಾಂತರ ಮಾಡಲು ಹಲವಾರು ಐಟಿ ಕಂಪೆನಿಗಳು ಬೇಡಿಕೆ ಇಟ್ಟಿವೆ.

Also Read  ಕಡಬ: ಅಕ್ರಮ ದನ ಸಾಗಾಟ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ➤ ಅಕ್ರಮ ಸಾಗಾಟದಲ್ಲಿ ಸಂಘಟನೆಯ ಮುಖಂಡ ಭಾಗಿ..⁉️

error: Content is protected !!
Scroll to Top