ನೇತ್ರಾವತಿ ನದಿಗಿಳಿದ ಮೂವರು ನೀರುಪಾಲು ► ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು ಸೆ.4. ಸ್ನಾನ ಮಾಡಲೆಂದು ನದಿಗಿಳಿದ ಮೂವರು ವಿದ್ಯಾರ್ಥಿಗಳು ನಿರುಪಾಲಾದ ಘಟನೆ ಮಂಗಳೂರು ಸಮೀಪದ ಇನೋಳಿ ನಡುಗುಡ್ಡೆ ಎಂಬಲ್ಲಿ ಸೋಮವಾರ ಅಪರಾಹ್ನ ನಡೆದಿದೆ. ನೀರುಪಾಲಾದವರನ್ನು ಮಂಗಳೂರಿನ ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಚಿತ್ರದುರ್ಗ ಮೂಲದ ಶ್ರೀರಾಮ್(21), ವಿಖಿಲ್(22) ಹಾಗೂ ಬಿಹಾರ ಮೂಲದ ಶುಭಂ(21) ಎಂದು ಗುರುತಿಸಲಾಗಿದೆ. ಈ ಪೈಕಿ ವಿಖಿಲ್ ಅವರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. […]

ನೇತ್ರಾವತಿ ನದಿಗಿಳಿದ ಮೂವರು ನೀರುಪಾಲು ► ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು Read More »

ಕರಾವಳಿ