Udupi

ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಉಪನಗರದ ನಾಲ್ಕನೇ ಹಂತದಲ್ಲಿ ವರದಿಯಾಗಿದೆ.   50 ವರ್ಷದ ಗೌರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಲಹಂಕ ಉಪನಗರದ ವಸತಿ ಸಮುಚ್ಚಯದ ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರದಂದು ಗೌರಿ ಕಾಣೆಯಾಗಿದ್ದರು. ಗಾಬರಿಗೊಂಡ ಅವರ ಕುಟುಂಬಸ್ಥರು ನಂತರ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಭಾನುವಾರ ಗೌರಿ ಅವರ ಶವ […]

ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಎಸ್.ಎಸ್.ಪಿ.ಯು ಕಾಲೇಜು ➤ ಕಲಾ ವಿಭಾಗದಲ್ಲಿ ಲಿಖಿತಾ ಎಂ ಡಿ , ವಿನುತಾ ಡಿಸ್ಟಿಂಕ್ಷನ್

(ನ್ಯೂಸ್ ಕಡಬ) newskadaba.com ಕಡಬ , ಜು.28:  2019-2020 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಹೊರಬಂದಿದೆ. ಎಸ್.ಎಸ್.ಪಿ.ಯು ಕಾಲೇಜುನಲ್ಲಿ ಈ ಬಾರಿ ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.         ಲಿಖಿತಾ ಎಂ ಡಿ ಎಂಬ ವಿದ್ಯಾರ್ಥಿನಿ 533 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ಮಾಯಿಲಪ್ಪ ಗೌಡ ಹಾಗೂ ಶ್ರೀಮತಿ ದೇವಕಿ ದಂಪತಿಗಳ ಪುತ್ರಿ. ಇನ್ನು, ವಿನುತಾ ಎಂಬಾಕೆ ಕಲಾ

ಎಸ್.ಎಸ್.ಪಿ.ಯು ಕಾಲೇಜು ➤ ಕಲಾ ವಿಭಾಗದಲ್ಲಿ ಲಿಖಿತಾ ಎಂ ಡಿ , ವಿನುತಾ ಡಿಸ್ಟಿಂಕ್ಷನ್ Read More »

ಕರಾವಳಿ, ಕರ್ನಾಟಕ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಫೂಜೆ ➤ ನಿರ್ಮಲಾನಂದನಾಥ ಸ್ವಾಮೀಜಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com  ಜು.26:  ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಶ್ರೀ ರಾಮಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪುಣ್ಯಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ.       ವಿಶ್ವ ಹಿಂದು ಪರಿಷದ್ ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ಪದಾಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಮುನಿರಾಜು ಅವರು ಸ್ವಾಮೀಜಿಯವರನ್ನು ಭೇಟಿ ಮಾಡಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪರವಾಗಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದು, ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ.ಇದೇ ಸಂದರ್ಭದಲ್ಲಿ, ರಾಮಮಂದಿರದ ಶಿಲಾನ್ಯಾಸಕ್ಕಾಗಿ ಸ್ವಾಮೀಜಿಯವರ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಫೂಜೆ ➤ ನಿರ್ಮಲಾನಂದನಾಥ ಸ್ವಾಮೀಜಿಗೆ ಆಹ್ವಾನ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.25: ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ. ಸ್ವ ಉದ್ಯೋಗದಲ್ಲೂ ಇನ್ನೊಬ್ಬರ ಅನುಕರಣೆಯೇ ಈ ನಷ್ಟಕ್ಕೆ ಕಾರಣ ಎನ್ನಬಹುದಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಗ್ರಾಮವೊಂದರ ಸಹೋದರರಿಬ್ಬರು ತಮ್ಮ ಸ್ವ ಉದ್ಯೋಗದ ಮೂಲಕ ಹೆಸರುವಾಸಿಯಾಗಿದ್ದಾರೆ. ಕೋಟಿಗಟ್ಟಲೆ ಬಂಡವಾಳ ಹಾಕಿ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಾಗುವಂತಹ ಪರಿಕರಗಳನ್ನು ತಮ್ಮ ಮನೆಯಲ್ಲೇ ತಯಾರಿಸುವಲ್ಲಿ ಈ

ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು Read More »

ಕರಾವಳಿ, ಕರ್ನಾಟಕ

ಮೈಸೂರು ಮೃಗಾಲಯದ ‘ಬ್ರಹ್ಮ’ ಗಂಡು ಹುಲಿ ಸಾವು

(ನ್ಯೂಸ್ ಕಡಬ) newskadaba.com ಮೈಸೂರು, ಜು.25: ಚಾಮರಾಜೇಂದ್ರ ಮೃಗಾಲಯದಲ್ಲಿ ʻಬ್ರಹ್ಮʼ ಹೆಸರಿನ ಗಂಡು ಹುಲಿಯು (20) ಶುಕ್ರವಾರ ಮಧ್ಯಾಹ್ನ ಸಾವನ್ನಪ್ಪಿದೆ.ಹುಲಿಯು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣದಿಂದಾಗಿ ಇಂದು ಮಧ್ಯಾಹ್ನ ಮೃತಪಟ್ಟಿದೆ.   ಬ್ರಹ್ಮ ಹುಲಿಯನ್ನು 2008ರ ಮಾರ್ಚ್‌ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಿಂದ ಸೆರೆಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಯೋಗ ಗುರು ಬಿ.ಕೆ.ಎಸ್‌. ಅಯ್ಯಂಗಾರ್‌ ಅವರು ಹುಲಿಯ ಜೀವಮಾನ ಪರ್ಯಂತರಕ್ಕೂ ದತ್ತು

ಮೈಸೂರು ಮೃಗಾಲಯದ ‘ಬ್ರಹ್ಮ’ ಗಂಡು ಹುಲಿ ಸಾವು Read More »

ಕರಾವಳಿ, ಕರ್ನಾಟಕ

ದ. ಕ ಹಾಗೂ ಉಡುಪಿಯಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ ➤ ಜಿಲ್ಲಾಧಿಕಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಡುಪಿ: ಜು.25., ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌ ಅವರು ಉಭಯ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರದ ಲಾಕ್‌ಡೌನ್‌ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ ಮಂಗಳವಾರ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ರಾಜ್ಯದ ಜನತೆಯನ್ನು

ದ. ಕ ಹಾಗೂ ಉಡುಪಿಯಲ್ಲಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ ➤ ಜಿಲ್ಲಾಧಿಕಾರಿ ಸ್ಪಷ್ಟನೆ Read More »

ಕರಾವಳಿ

ಉಡುಪಿಯ ಆಶಾ ಕಾರ್ಯಕರ್ತೆ, ಆಟೋ ಚಾಲಕಿ ರಾಜೀವಿ ಕೆಲಸಕ್ಕೆ ಉಪರಾಷ್ಟ್ರಪತಿಯಿಂದ ಶ್ಲಾಘನೆ.!!!

(ನ್ಯೂಸ್ ಕಡಬ) newskadaba.com ಉಡುಪಿ: ಜು.25., ಮುಂಜಾನೆ 3 ಗಂಟೆಯ ವೇಳೆ ಸ್ವತಃ ಆಟೋ ಚಲಾಯಿಸಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿರುವ ಆಶಾಕಾರ್ಯಕರ್ತೆ ರಾಜೀವಿ ಅವರ ಕಾರ್ಯ ಪ್ರಶಂಸನೀಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಉಪರಾಷ್ಟ್ರಪತಿ, ಮುಂಜಾನೆ 3 ಗಂಟೆಯ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಆಶಾಕಾರ್ಯಕರ್ತೆ ರಾಜೀವಿ ಅವರ ಕಾರ್ಯ ಪ್ರಶಂಸನೀಯ ಎಂದಿದ್ದಾರೆ. ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬವರು ರಾಜೀವಿ ಅವರಿಗೆ ಕರೆ ಮಾಡಿ

ಉಡುಪಿಯ ಆಶಾ ಕಾರ್ಯಕರ್ತೆ, ಆಟೋ ಚಾಲಕಿ ರಾಜೀವಿ ಕೆಲಸಕ್ಕೆ ಉಪರಾಷ್ಟ್ರಪತಿಯಿಂದ ಶ್ಲಾಘನೆ.!!! Read More »

ಕರಾವಳಿ

ತಾಯಿಯ 11ನೇ ದಿನದ ತಿಥಿ ವಿಧಿ ವಿಧಾನದ ಬಳಿಕ ಮಕ್ಕಳಿಬ್ಬರು ಮೃತ್ಯು.!!!

(ನ್ಯೂಸ್ ಕಡಬ) newskadaba.com ಪಡುಬಿದ್ರಿ: ಜು.25., ತಾಯಿ ಮೃತಪಟ್ಟ 11ನೇ ದಿನಕ್ಕೆ ಇನ್ನಿಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಉಡುಪಿಯ ಪಡುಬಿದ್ರಿಯಲ್ಲಿ ನಡೆದಿದೆ. o ಪಡುಬಿದ್ರಿಯ ದಿ.ವೆಂಕಟರಾಯ ಆಚಾರ್ಯ ಅವರ ಪತ್ನಿ ವಾರಿಜಾಕ್ಷಿ ಆಚಾರ್ಯ (80) ನಿಧನ ಹೊಂದಿದ್ದರು. ಜುಲೈ 22ರ ಬುಧವಾರದಂದು 11ನೇ ದಿನದ ತಿಥಿ ವಿಧಿ ವಿಧಾನಗಳು ನಡೆದು ಕೆಲ ಗಂಟೆಗಳಲ್ಲಿ ಮಕ್ಕಳ ಪೈಕಿ ಹಿರಿಯ ಮಗನಾದ ಉದಯ ಆಚಾರ್ಯ(55) ಎಂಬವರು ಮಧ್ಯಾಹ್ನದ ಊಟ ಮುಗಿಸಿ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದರು.

ತಾಯಿಯ 11ನೇ ದಿನದ ತಿಥಿ ವಿಧಿ ವಿಧಾನದ ಬಳಿಕ ಮಕ್ಕಳಿಬ್ಬರು ಮೃತ್ಯು.!!! Read More »

ಕರಾವಳಿ

ಉಡುಪಿಯಲ್ಲಿಂದು 190 ಮಂದಿಯಲ್ಲಿ ಕೊರೊನಾ ಸೋಂಕು

(ನ್ಯೂಸ್ ಕಡಬ) newskadaba.com ಉಡುಪಿ, ಜು.24: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಶುಕ್ರವಾರ ಒಂದೇ ದಿನ 190 ಹೊಸ ಪ್ರಕರಣಗಳು ಪತ್ತೆಯಾಗಿವೆ.     ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3036ಕ್ಕೆ ಏರಿಕೆಯಾಗಿವೆ. ಜಿಲ್ಲೆಯಲ್ಲಿ ಇಂದು ಮತ್ತೆ 88 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 1096 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 1940 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.      

ಉಡುಪಿಯಲ್ಲಿಂದು 190 ಮಂದಿಯಲ್ಲಿ ಕೊರೊನಾ ಸೋಂಕು Read More »

ಕರಾವಳಿ

ಮುಂದುವರಿದ ಕೊರೋನಾ ಆರ್ಭಟ ➤ ದ. ಕನ್ನಡದಲ್ಲಿ ಸಾವಿನ ಸಂಖ್ಯೆ 107ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.24:  ಕರ್ನಾಟದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದೆ.  ದ.ಕ. ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಮತ್ತೊಂದೆಡೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.     ಮಂಗಳೂರು ನಿವಾಸಿ 44 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಮಂಗಳೂರು ಮೂಲದ 56 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮಂಗಳೂರಿನ 67 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಬಂಟ್ವಾಳದ 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮೂಲದ 67 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮಂಗಳೂರಿನ 75 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಮಂಗಳೂರು ನಿವಾಸಿ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಮುಂದುವರಿದ ಕೊರೋನಾ ಆರ್ಭಟ ➤ ದ. ಕನ್ನಡದಲ್ಲಿ ಸಾವಿನ ಸಂಖ್ಯೆ 107ಕ್ಕೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top