ಉದನೆ-ಶಿಬಾಜೆ ಜಿ.ಪಂ. ರಸ್ತೆಗೆ 80 ಲಕ್ಷ ರೂ. ► ಗೋಳಿತ್ತಡಿ-ತ್ರಿವೇಣಿ ಸರ್ಕಲ್ ರಸ್ತೆಗೆ 49 ಲಕ್ಷ ರೂ ಅನುದಾನ ಮಂಜೂರು: ಪಿ.ಪಿ.ವರ್ಗೀಸ್
(ನ್ಯೂಸ್ ಕಡಬ) newskadaba.com ಕಡಬ, ಅ.17. ಉದನೆ-ಶಿಬಾಜೆ ಜಿ.ಪಂ. ರಸ್ತೆಯ ಮರುಡಾಮರೀಕರಣಕ್ಕೆ ನಬಾರ್ಡ್ನಿಂದ 80 ಲಕ್ಷ ರೂ.ಅನುದಾನ ಮಂಜೂರುಗೊಂಡಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ತಿಳಿಸಿದ್ದಾರೆ. ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿಗೆ 2 ವರ್ಷಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಒತ್ತಡ ಹೇರಲಾಗಿತ್ತು. ಈ ವೇಳೆ ಅನುದಾನ ಬಿಡುಗಡೆಗೊಂಡಿದ್ದರೂ ಅನುದಾನವನ್ನು ಕಾರಣಾಂತರದಿಂದ ತಡೆಹಿಡಿಯಲಾಗಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಶಿಫಾರಸ್ಸಿನೊಂದಿಗೆ ಕೆಪಿಸಿಸಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ, ನೆಲ್ಯಾಡಿ ಕ್ಷೇತ್ರದ ಜಿ.ಪಂ.ಸದಸ್ಯ […]
